2.03.2009

journy ....ದ ಪಯಣ


  • ರೂಟ್ನಂಬರ್೨೪.....
    ಬ್ಲಾಗ್ ತುಂಬಾ ದಿನದಿಂದ ಬರೀಬೇಕು ಅಂತ ಪ್ಲಾನ್ ಹಾಕ್ತ ಇದ್ದೇ.. ಟೈಮ್ ಸಿಕ್ಕಿರ್ಲಿಲ್ಲ.. ಈಗ ಅದಕ್ಕೆ ಕಾಲ ಕೂಡಿ ಬಂತು. ಸೋ ಇದ್ರಲಿ ಇರೋ ವಿಷ್ಯ ಸ್ವಲ್ಪ ಔಟ್ಡೇಟೆಡ್ ಆಗಿರುತ್ತೆ. ಮಾರತ್ತಳ್ಳಿ ಇಂದ ನನ್ favourite ಏರಿಯಾ ರಾಜಾಜಿ ನಗರಕ್ಕೆ ಶಿಫ್ಟ್ ಆದಾಗಿನಿಂದ ನನ್ನ ದಿನಚರಿ ಹೀಗಿದೆ..
ನನ್ನ ದಿನಚರಿ ಹೇಳೋಕ್ ಮೊದ್ಲು ..ನಾ ಯಾಕೆ ಮಾರತ್ತಳ್ಳಿ ಇಂದ ರಾಜಾಜಿ ನಗರಕ್ಕೆ ಶಿಫ್ಟ್ ಆದೇ ಅಂತ ಹೇಳ್ತೀನಿ.. ಮಾರತ್ತಳ್ಳಿ ಆಫೀಸ್ ಗೆ ತುಂಬಾ ಹತ್ರ..ಸೊ ಆಫೀಸ್ ಇಂದ ಮನೆಗೆ ಹೋಗಿ ಏನು ಮಾಡೋದು ಅನ್ನೋ ಫೀಲಿಂಗ್ ಬರ್ತಾ ಇತ್ತು ಮತ್ತೆ ಲೇಟ್ ಆಗಿ ಏಳುವುದು.. ಲೇಟ್ ಆಗಿ ಮಲುಗುವುದು ನಡೀತಾ ಇತ್ತು.. ಜೀವನ ದಲ್ಲಿ ಒಂದ್ ಆರ್ಡರ್ ಅನ್ನೋದೇ ಇರ್ಲಿಲ್ಲ. ರಾಜಾಜಿ ನಗರಕ್ಕೆ ಶಿಫ್ಟ್ ಆದ್ರೆ... ಬೆಳಗೇ ಬೇಗ ಏಳ್ಬೇಕು ..ಆಫೀಸ್ ಇಂದ ಬೇಗ ಬರಬೇಕು.. ಮತ್ತೆ ಶಟ್ಲ್ ಅಲ್ಲಿ ಓದೋಕೆ ಟೈಮ್ ಸಿಗುತೆ (!!) ಅನ್ನೋ ಲೆಕ್ಕಾಚಾರ ಹಾಕಿ... ರಾಜಾಜಿ ನಗರಕ್ಕೆ ಶಿಫ್ಟ್ ಆದೆ.

ಮೊದಲನೆ ದಿನ ಶಟ್ಲ್ ಅಲ್ಲಿ:.. ಮೊದಲ ದಿನ ಬೆಳಗ್ಗೆ 7 ಗಂಟೆ ಶಟ್ಲ್ ಗೆ 6:30 ಇಂದನೇ ಕಾಯ್ತಾ ಇದ್ದೇ (ಬಸ್ ಮಿಸ್ ಆಗ್ಬಿಟ್ರೆ ಅನ್ನೋ ಭಯ). ನೌಷಾದ್ (ನನ್ ಟೀಮ್ ಮೇಟ್) ಬಿಟ್ಟು ಇನ್ನು ಯಾರು ಪರಿಚಯ ಇರ್ಲಿಲ್ಲ. ಸೋ ಬೆಳಗ್ಗೆ ಮನೆಯಿಂದ ಹೊರಟಾಗ ಬಸ್ ಅಲ್ಲಿ ಫುಲ್ ಸೈಲೆಂಟ್. ನನ್ ಪ್ಲಾನ್ ಸರಿಯಾಗಿದೆ ಅಂತ ಅನಿಸಿತು. ಆದ್ರೆ ನನ್ ಲೆಖ್ಖ ತಪ್ಪು ಅಂತ ತಿಳಿದುದ್ದು ಸಂಜೆ ರಿಟರ್ನ್ ಜರ್ನೀ ಅಲ್ಲಿ...

ರಿಟರ್ನ್ ಜರ್ನೀ.. ನಾ ಶಟ್ಲ್ ಹತ್ತಿದಾಗ ಆಲ್ಮೋಸ್ಟ್ ಫಿಲ್ ಆಗಿತ್ತು ..ಖಾಲಿ ಇರೋ ಒಂದ್ ವಿಂಡೊ ಸೀಟಲ್ಲಿ ಕುಳಿತುಕೊಂಡೆ. ಬಸ್ ಸ್ಟಾರ್ಟ್ ಆಗಿ ಒಂದ್ 10 ನಿಮಿಷಕ್ಕೆ ಎಲ್ಲರೂ ಅಂತ್ಯಾಕ್ಷರಿ ಆಡೊಕೆ ಸ್ಟಾರ್ಟ್ ಮಾಡಿದ್ರೂ.. ಅಷ್ಟೇ.. ನನ್ನ ಓದೋ ಪ್ಲಾನ್ ಬಗಾಲ್ ಆಗೊಯ್ತು ..ನಾನು ಅವ್ರ ಜೊತೆ ಸೇರಿಕೊಂಡೆ ..ಬುಕ್ ವಿಷ್ಯ ಮರ್ತೇವೋಯ್ತು... ಅವತ್ತಿನಿಂದ ಇವತ್ತಿನ ವರೆಗೂ ಒಂದು ಪೇಜ್ ಕೂಡ ಓದೋಕೆ ಆಗ್ಲಿಲ್ಲ . ಈ ಫೀಲಿಂಗ್ ಗಿಂತ ಒಂದ್ ಅಷ್ಟು ಜನ ಒಳ್ಳೇ ಫ್ರೆಂಡ್ಸ್ ಸಿಕಿದ್ರು ಅನ್ನೋ ಖುಷಿ ಇದೆ..

ನನ್ನ ಮೇನ್ ಟಾಪಿಕ್ ಗೆ ವಾಪಸ್ ಬರ್ತೀನಿ ..ನನ್ನ ದಿನಚರಿ ಇನ್ R24.. ನನ್ ಸ್ಟಾಪ್ ( ಸಪ್ತ ಗಿರಿ ಬಾರ್) ಫರ್ಸ್ಟ್ ಸ್ಟಾಪ್ ನಂ ಶಟ್ಲ್ ಗೆ ..ನಾನು, ಮಧು ಮತ್ತೆ ನೌಷಾದ್ ಹತ್ತುತೀವಿ ..ನೆಕ್ಸ್ಟ್ ಸ್ಟಾಪ್ ನವರಂಗ್.. ಒಬ್ರು ಸ್ಪೆಶಲ್ ಪರ್ಸನ್ ಇಲ್ಲಿ ಹತ್ತುತ್ತಾರೆ.. ಆವ್ರು ನಂ ಶಾರುಖ್ ಕಂಬಾರ್. ..ಶಟ್ಲ್ ಗೆ ಯಾವಾಗ್ಲೂ ಲೇಟಾಗಿ ಬಂದು ರನ್ನಿಂಗ್‌ನಲ್ಲಿ ಹತ್ತುತ್ತಾರೆ ( DDLJ style ಅಲ್ಲಿ) ಅದ್ದಕ್ಕೆ ಅವ್ರಿಗೆ ಆ ಹೆಸ್ರು. ನಮ್ಮ ಶಟ್ಲ್ ಲಾಂಗೆಸ್ಟ್ ಚೇಸ್ ಕೂಡ ಅವ್ರ ಹೆಸ್ರಲ್ಲೆ ಇದೆ...( ಚೇಸ್ ಅಂದ್ರೆ ..ಶಟ್ಲ್ ಮಿಸ್ ಮಾಡಿ ಕೊಂಡು ..ಆಟೋ ದಲ್ಲಿ ಚೇಸ್ ಮಾಡಿ ಬಸ್ ಹಿಡಿಯೋದು) ನವರಂಗ್ ಆದ್ಮೇಲೆ ಬಸ್ ಮರಿಯಪ್ಪನ ಪಾಳ್ಯ, ದೇವಯ್ಯ ಪಾರ್ಕ್ ಅಲ್ಲಿ ನಿಲ್ಲಿಸಿ ಒಂದ್ ಅಷ್ಟು ಜನಾನ ಹತ್ತಿಸಿಕೊಳ್ಳುತ್ತೆ....ಅದ್ರಲ್ಲಿ main ಅಂದ್ರೆ ..ರಘು@ ನವರಂಗ್, ಮಂಜು@ದೇವಯ್ಯ ಪಾರ್ಕ್. ನಮ್ ಹುಡುಗ್ರು ಎಲ್ಲರೂ ಶಟ್ಲ್ ಹೋಯ್ತಾ ಅಂತ ಫೋನ್ ಮಾಡಿದ್ರೆ ..ಈ ಮಂಜ ..ಶಟ್ಲ್ ಬಂತಾ ಅಂತ ಫೋನ್ ಮಾಡೋ ಗಿರಾಕಿ.
ದೇವಯ್ಯ ಪಾರ್ಕ್ ಲಾಸ್ಟ್ ಪಿಕಪ್ ಆದ್ಮೇಲೆ ..ನೆಕ್ಸ್ಟ್ happening ಪ್ಲೇಸ್ ಬಂದು..8ತ್ ಕ್ರಾಸ್ ಮಲ್ಲೇಶ್ವರ ..ಇದು ಯಾಕೆ happening ಪ್ಲೇಸ್ ಅಂದ್ರೆ ...ಬಿಕಾಸ್ ಆಫ್ WIPRO ಹುಡುಗಿ... ಆಕೆ ಯಾರು ಎಲ್ಲಿಯವ್ಲೂ ..ಎನ್ ಹೆಸ್ರು ಏನು ಗೊತ್ತಿಲ್ಲ ..ಬಟ್ ನೋಡಿದಾಗಲ್ಲೆಲ್ಲ ಫೋನ್ ಅಲ್ಲಿ ಇರೋವ್ಲೂ..8ತ್ ಕ್ರಾಸ್ ಸ್ಟಾಪ್ ಬಂತು ಅಂಡ್ ತಕ್ಷಣ ..ನಮ್ ಬಸ್ಸಲ್ಲಿ ಇರೋ ಎಲ್ಲರ ಕತ್ತು ಲೆಫ್ಟ್ ಗೆ 90 ಡಿಗ್ರೀ ಟರ್ನ್.. ಎಲ್ಲರ್ ಬಾಯಲ್ಲೂ RAGHU RAGHU ಅಂತ ಕಿರ್ಚಾಟ ..ನೆಕ್ಸ್ಟ್ 5 ಸೆಕೆಂಡ್ ಈ ಹುಡ್ಗಿ ಬಗ್ಗೆ ನೇ ಡಿಸ್ಕಶನ್ ನಡಿಯುತ್ತೆ ..ಬರೀ 5 ಸೆಕೆಂಡ್ ಯಾಕೆ ಅಂದ್ರೆ..8ತ್ ಕ್ರಾಸ್ ಬಸ್ ಸ್ಟಾಪ್ ಆಗಿ 5 ಸೆಕೆಂಡ್ ಗೆ ಒಂದ್ ಗಣಪತಿ ದೇವಸ್ಥಾನಸಿಗುತ್ತೆ ..ನಮ್ ಹುಡುಗ್ರು ಅಲ್ಲೀವರ್ಗು ಹುಡ್ಗಿ ಬಗ್ಗೆ ಕಾಮೆಂಟ್ ಮಾಡ್ತಾ ಇದ್ದೊವ್ರು .. sudden ಆಗಿ ..ಕಣ್ ಮುಚ್ಚಿ ಕೈ ಮುಗಿತಾರೆ ..ಸೋ ಹುಡ್ಗಿ ಟಾಪಿಕ್ ಗೆ 5 ಸೆಕೆಂಡ್ ಬ್ರೇಕ್ ..ಆಮೇಲೆ ಮತ್ತೆ RAGHU ನ ರೇಗಿಸೋದು ಸ್ಟಾರ್ಟ್..
ಶಟ್ಲ್ ಓಲ್ಡ್ ಮದ್ರಾಸ್ ರೋಡ್ ಗೆ ಬರೋ ಅಷ್ಟ್ರಲ್ಲಿ ಎಲ್ಲರೂ ಪಾಚ್ ಕೊಂಡಿರ್ತಾರೆ . .ಆದ್ರೆ ನಾ ಮಾತ್ರ ಎಚ್ಚರ ಇರ್ತೀನಿ ..ದಿನಾ ಸಿಗೋ ಬೆನ್ನಿಗನಹಳ್ಳಿ ಇಂಜಿನಿಯರಿಂಗ್ ಕಾಲೇಜ್ ಹುಡುಗೀರ್ ಗುಂಪು, ಪೆಟ್ರೋಲ್ ಬಂಕ್ ಸ್ಟಾಪ್ ಅಲ್ಲಿ ಕಾಲೇಜ್ ಬಸ್ ಗೆ ಕಾಯುತ್ತಾ ಇರೋ ಒಂದ್ pair .. ಅದ್ರಲ್ಲಿ ಯಾವಾಗಲು ಮಾತಾಡೋ ಹುಡ್ಗಿ.. ಅವ್ಳು ಹೇಳಿದ್ದಕ್ಕೆಲ್ಲ ತಲೆ ಕುಣ್ಸೊ ಹುಡ್ಗ.. ಏನು ಚೇಂಜ್ ಆಗಲ್ಲ...
ಮತ್ತೆ ಬಸ್ ಆಫೀಸ್ ಹತ್ರ ಬರೋ ಅಷ್ಟ್ರಲ್ಲಿ ಎಲ್ಲರೂ ಎಚ್ಚರ ಆಗ್ತಾರೆ ...ID ಕಾರ್ಡ್ ಗೆ ಹುಡುಕಾಟ.. ನಂ ಸುರೇಶ್ ಕೆಲವು ಸಾರಿ ಕೈ ನ ಮೇಲ್ ಮಾಡಿ ಅದುನ್ನೇ ID ಕಾರ್ಡ್ ಅಂತ ತೋರಿಸಿದ್ದು ಇದೆ ..ನಂ ಸೆಕ್ಯೂರಿಟೀ ಅದುನ್ನ ನೋಡ್ಕೊಂಡ್ ಹಂಗೆ ವಾಪಸ್ ಹೋಗಿದ್ದು ಇದೆ.. ನಾನು, ಮಂಜ, ಚೈತ್ರ ಬಿಟ್ಟು ಇನ್ ಎಲ್ಲರೂ ಫರ್ಸ್ಟ್ ಸ್ಟಾಪ್ ಅಲ್ಲಿ ಇಳ್ಕೊತಾರೆ ..ಲಾಸ್ಟ್ ಸ್ಟಾಪ್ ಅಲ್ಲಿ ಚೈತ್ರ ಗೆ ಫೋರ್ಸ್ ಮಾಡಿ ಎಳಿಸ್‌ಬೇಕು ..ಅವ್ರ್ದು ದಿನಾ ಅದೇ ಡೈಲಾಗ್.."ಈ ಆಫೀಸ್ ಯಾಕೆ ಇಷ್ಟ್ ಜಲ್ದಿ ಬರುತ್ತೆ.. ಬೆಳ್ಳಗೆ ಯಾಕೆ ಆಗುತ್ತೆ.."
ಎಲ್ಲರಿಗೂ ಬೈ ಹೇಳಿ ಆಫೀಸ್ ಒಳಗೆ ಹೋಗ್ತೀನಿ .. ಡೆಸ್ಕ್ ಗೆ ಹೋದಮೇಲೆ ..ಅದೇ ಬೇರೆ ಪ್ರಪಂಚ ..ನನ್ನಲಿ ನಾ ಇಲ್ಲ..ಕೆಲಸವೆ ಮನವೆಲ್ಲ..
ರಿಟರ್ನ್ journey ಬಗ್ಗೆ ಇನ್ಯಾವಗಾದ್ರು ಬರೀತೀನಿ...
until then ...ವಸಿ ತಡ್ಕಲಿ...

(he is my brother, called chandan..)

No comments:

Post a Comment