2.07.2009

ವೆಂಕಟ ತಂದ ಸಂಕಟ







ಹಾಯ್..ಸ್ವಲ್ಪ ತಡವಾಯಿತು. ದಿನ ಬ್ಲಾಗ್ಗೆ ಬರೀಬೇಕು ಅಂಥ ಅನ್ಕೋತೀನಿ. ಬಟ್ ಆದರೆ ಸೀರಿಯಸ್ನೆಸ್ಸ್ ಇನ್ನು ಬಂದಿಲ್ಲ. ಆದ್ದರಿಂದ ವಾರಕ್ಕೆರೆಡು ಸಲ ಅನ್ನೋ ಹಾಗಾಗಿದೆ.
ಈ ವಾರ ಎರಡು ವಿಷ್ಯದ ಬಗ್ಗೆ ಹೇಳ್ಲೇ ಬೇಕು. ಒಂದು ವೆಂಕಟ ಇನ್ ಸಂಕಟ. ಇದಕ್ಕೆ ಕ್ಲೋಸ್ಲಿ ರಿಲೇಟೆಡ್ ಇನ್ನೊಂದು ನ್ಯೂಸ್ ಅಂದ್ರೆ ಮಣಿ ಅಲಿಯಾಸ್ ಮಣಿವಣ್ಣನ್ ಇನ್ ಸಂಕಟ.
ಮೊದ್ಲ್ನೇದು ಫಿಲ್ಮಂಗೆ ಸಂಬಂಧಿಸಿದ್ದು. ಕನ್ನಡ ಅಂದಕಾಲತ್ತಿಲೇ ಚಾಕಲೋಟ್ ಹೀರೋ ಹಾಲಿ ಕಾಮಿಡಿ ಹೀರೋ ರಮೇಶ್ ನಿದರ್ೇಶನ ಕಂ ಅಭಿನಯದ ವೆಂಕಟ ಇನ್ ಸಂಕಟ. ಈ ಚಿತ್ರದ ಪ್ರೆಸ್ಮೀಟ್ ಹೋಟೆಲ್ ಸಂದೇಶ್ ದಿ ಪ್ರಿನ್ಸ್ನಲ್ಲಿ ಕರೆಯಲಾಗಿತ್ತು. ಇದರ ಪ್ರಮುಖ ಆಕರ್ಷಣೆ ಅಂದ್ರೆ, ಶಮರ್ಿಳಾ ಮಾಂಡ್ರೆ, ಸಜನಿ ಚಿತ್ರದ ಈ ಸಾಜಿನಿ ಗೋಷ್ಠಿಯ ಸೆಂಟರ್ ಆಫ್ ಅಟ್ರಾಕ್ಷನ್.
ನವಗ್ರಹ ಚಿತ್ರದ ಮೂಲಕ `ಕಣ್ ಕಣ್ನ ಸಲಿಗೆ......ಸಲಿಗೆ ಅಲ್ಲ ಇದು ಸುಲಿಗೆ.....ಹಾಡಿನ ಮೂಲಕ ಚಿತ್ರ ಪ್ರೇಮಿಗಳ ಹೃದಯ ಸುಲಿಗೆ ಮಾಡಿದ ಈ ಮೋಹಕ ಮದನಾರಿ ಕನ್ನಡದ ಸಮಸ್ತ ನಾಯಕಿಯರೂ ನಾಚುವಂತೆ ವೆಂಕಟದಲ್ಲಿ ನತರ್ಿಸಿದ್ದಾಳೆ. ಚಿತ್ರದ ನಾಯಕ್ ವೆಂಕಟ್ ಉರುಫ್ ರಮೇಶ್, ಈ ವಿಷಯ ಬಹಿರಂಗ ಪಡಿಸಿದರು. ಕೃತಕ ಮಳೆಯಲ್ಲಿ ನೆನೆಯುತ್ತ ಹಾಡಿ ಕುಣಿದಿರುವ ಶಮರ್ಿಳಾ ಮಾಂಡ್ರೆ, ಬಾಲಿವುಡ್ನ ರಂಗೀಲ ಶಮರ್ಿಳಾಗೆ ಸೈಡ್ ಹೊಡೆಯುವ ಲಕ್ಷಣಗಳು ಇವೆ ಅನ್ನೊಂದು ರಮೇಶ್ ಅಂಬೋಣ.





ಮಣಿ ಸಂಕಟ .............
ವೆಂಕಟನ ವಿಷ್ಯಯ ಬಿಡಿ. ಈಗ ಸಂಕಟದ ಬಗ್ಗೆ ಬರೋಣ. ಮೈಸೂರಿನ ಡಿಸಿ ಅಲಿಯಾಸ್ ಸೋಕಾಲ್ಡ್ ಕಡಕ್ ಡಿಸಿ ಮಣಿವಣ್ಣನ್ ಸಾಹೆಬ್ರಿಗೂ ಸ್ಯಾರ್ಟಡೆ ಅನ್ನೋದು ನಿಜಕ್ಕೂ `ಶನಿ'ವಾರವೇ ಆಗಿತ್ತು. ಪರಿಣಾಮ ಬೀದಿಯಲ್ಲಿ ಹೋಗುವ `ಡ್ಯಾಶ್' ಅನ್ನು ಹೋಂ ಆಫೀಸ್ಗೆ ಕರೆಸಿಕೊಂಡು ಸಂಕಟ ಎದುರಿಸುವಂತಾಗಿತ್ತು.
ಅದು ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂಬಂಧಿಸಿದ ಸುದ್ದಿಯಿಂದ. ಡಿಸಿ ಹೇಳಿದ್ರೂ ವಾಜಪೇಯಿ ಹೊಗೆ ಹಾಕಿಸಿಕೊಂಡ್ರಂತೆ ಅಂಥ ನಮ್ಮ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಸಂತಾಪ ಸಭೆ ನಡೆಸಿಯೇ ಬಿಟ್ರೂ. ಅರೇ ಮೀಡಿಯಾದವರಿಗೂ ಈ ಬಗ್ಗೆ ಮಾಹಿತಿನೇ ಇಲ್ಲ. ಅದ್ದೆಂಗೇ ಕುರುಬೂರ್ಗೆ ಹೋಗೆ ಮ್ಯಾಟರ್ ಗೊತ್ತಾಯ್ತು ಅಂತ ತಲೆ ಕೆಡಿಸಿಕೊಳ್ಳುತ್ತಿರುವಾಗಲೇ ವಿಷ್ಯದ ಬಾಲ ಮಣಿವಣ್ಣನ್ ಬುಡಕ್ಕೆ ಬಂದು ನಿಂತಿತ್ತು.
ಬಟ್ ದುರಂತ ಅಂದ್ರೆ, ಇಂಥ ಕಮ್ಯೂನಿಕೇಷನ್ ಗ್ಯಾಪ್ನಿಂದ ಉಂಟಾಗುವ ಸಣ್ಣ ಸಣ್ಣ ಪ್ರಕರಣಗಳನ್ನು ಸುದ್ದಿ ಮಾಡುವ ನೈನ್ ಮಿತ್ರರ ಬಗ್ಗೆ ಹೇಳಲೇ ಬೇಕು. ಇಲ್ಲಿ ರೈತ ಮುಖಂಡರು ಉದ್ದೇಶ ಪೂರ್ವಕವಾಗಿ ಸಂತಾಪ ಮಾಡಿಲ್ಲ. ಜತೆಗೆ ದೇಶದ ಪ್ರಧಾನಿ ಸತ್ತ ಸುದ್ದಿ ಕನ್ರ್ಫಂ ಮಾಡುವ ಜವಾಬ್ದಾರಿ ಜಿಲ್ಲಾಧಿಕಾರಿಯದ್ದು ಅಲ್ಲ. ಅಂದ ಮೇಲೆ ಇದಕ್ಯಾಕೆ ಇಷ್ಟು ಪ್ರಾಮುಖ್ಯತೆ ಕೊಡಬೇಕಿತ್ತು ಎಂಬ ಪ್ರಶ್ನೆ ಮೂಡುತ್ತದೆ. ಪಾಪ ರೈತರೇನೋ ತಿಳಿಯದೇ ಸಂತಾಪ ಸೂಚಿಸಿದರೆ, ಅಸಂತೃಪ್ತ ಬಿಜೆಪಿ ಕಾರ್ಯಕರ್ತರು ಮಾತ್ರ ತಿಳಿದು ತಿಳಿದೇ ಡಿಸಿ ನಿವಾಸ ಎದುರು ಪ್ರತಿಭಟನೆ ನಡೆಸಿದ್ರು. ಇದರ ಕಾರಣ ಏನು ಅನ್ನೋದು ಮಾತ್ರ ಒಪನ್ ಸಿಕ್ರೇಟ್........ಹ್ಹಹ್ಹಹ್ಹ



----------------------------

2 comments:

  1. rangila sharmila alla..urmila..
    barahada shaili chennagide..
    heege bariyiri

    ReplyDelete
  2. This comment has been removed by the author.

    ReplyDelete