7.08.2009

ನ್ಯೂ `ಸೆನ್ಸ್'......!


ಲೋಕಸಭೆಯಲ್ಲಿ ಮಹಿಳಾ ಮೀಸಲು ಮಂಡನೆ ಪ್ರಸ್ತಾಪವಾಗುತ್ತದೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ ಬಾಲಿವುಡ್ನಲ್ಲಿ ಇತ್ತೀಚಿಗೆ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದರೆ ಪುರುಷರು ಮಾತ್ರ ಸಖಾತ್ತಾಗಿಯೇ ಮೀಸಲು ಪಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ.

ಲೇಟೆಸ್ಟ್ ನ್ಯೂಸ್ ಅಂದ್ರೆಬಾಲಿವುಡ್ ನಟ ಜಾನ್ ಅಬ್ರಹಾಂ ವಿರುದ್ಧ ದಿಲ್ಲಿ ಕೋಟರ್್ ಕೆಂಗಣ್ಣು ಬೀರಿರುವುದು.ಸಾರ್ವಜನಿಕರು ಅಸಹ್ಯಪಡುವ ರೀತಿಯಲ್ಲಿ ಈತ ಪೋಟೋಗೆ ಫೋಸ್ ಕೊಟ್ಟಿದ್ದ. ಅದು ಆತನ ಹೊಸ ಚಿತ್ರ `ನ್ಯೂಯಾಕರ್್"ಗೆ ನೀಡಿದ್ದ ಫೋಸ್. ಇದನ್ನು ದಿಲ್ಲಿ ಲೋಕಲ್ ಪತ್ರಿಕೆಯೊಂದು ಯಥಾವತ್ತು ಪ್ರಕಟಿಸಿತ್ತು. ಇದನ್ನು ಪ್ರಶ್ನಿಸಿ ಎನ್ಜಿಒ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತ್ತು. ಆದರೆ ಠಾಣೆಯಲ್ಲಿ ನಟನ ವಿರುದ್ದ ದೂರು ದಾಖಲಿಸಿಕೊಳ್ಳದೆ ಸತಾಯಿಸಲಾಗುತ್ತಿತ್ತು.
ಈ ವಿಷಯ ಪತ್ರಿಕೆಗಳಲ್ಲಿ ಸುದ್ದಿಯಾಯಿತು. ಇದನ್ನು ಗಮನಿಸಿದ ನ್ಯಾಯಾಲಯ ಸುಮೋಟು ದೂರು ದಾಖಲಿಸಿಕೊಂಡಿದೆ. ಪರಿಣಾಮ ದಿಲ್ಲಿ ಪೊಲೀಸರು ಪರದಾಡುವಂತಾಗಿದೆ. ಈ ರೀತಿ ಚಿತ್ರನಟರು, ಸೆಲೆಬ್ರಿಟಿಗಳು ಮೈ ಪ್ರದರ್ಶನದ ಮೂಲಕ ವಿವಾದ ಸೃಷ್ಠಿಕೊಳ್ಳುವುದು ಇದೇ ಮೊದಲೇನಲ್ಲ. ಇದಕ್ಕೆ ದಶಕಗಳ ಇತಿಹಾಸವಿದೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ 1975ರಲ್ಲೇ ಇಂಥ ಮೊದಲ ಪ್ರಕರಣ ದೇಶದಲ್ಲಿ ದಾಖಲಾಗಿತ್ತು. ಅಂದು ನೃತ್ಯಗಾತರ್ಿ ಪ್ರೋತಿಮಾ ಬೇಡಿ, ಮುಂಬೈನ ಜೂಹು ಬೀಚ್ನಲ್ಲಿ ನಗ್ನಳಾಗಿ ಓಡಿದ್ದಳು. ಆನಂತರ ಇಂಥ ನ್ಯೂಸೆನ್ಸ್ ಘಟಿಸಲು ಸುಮಾರು ಎರಡು ದಶಕಗಳೇ ಬೇಕಾಯಿತು.

* 1995ರಲ್ಲಿ ಫ್ಯಾಷನ್ ಲೋಕದ ತಾರೆಗಳಾದ ಮಧುಸಪ್ರೆ ಹಾಗೂ ಮಿಲಿಂದ್ ಸೋಮನ್, ನಗ್ನರಾಗಿ ಶೂ ಒಂದರ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು.

* 2006ರ ನವೆಂಬರ್ನಲ್ಲಿ ಬಾಲಿವುಡ್ನ ಐಟಂ ನಂಬರ್ ರಾಖಿ ಸಾವಂತ್ ಸರದಿ. ಈಕೆ ಪಾಟ್ನದ ಸ್ಟೇಜ್ ಶೋ ಒಂದರಲ್ಲಿ ಅಶ್ಲೀಲವಾಗಿ ಕುಣಿದಿದ್ದಳು.

* 2006 ಡಿಸೆಂಬರ್ನಲ್ಲಿ ನಟ ಹೃತಿಕ್ ರೋಶನ್ ಹಾಗೂ ಅಮಿತಾಬ್ ಸೊಸೆ ಐಶ್ವರ್ಯ ವಿರುದ್ಧ ಕೇಸು ದಾಖಲಾಗಿತ್ತು. ಈ ಇಬ್ಬರು ಧೂಮ್-2 ಚಿತ್ರದ ಚುಂಬನ ದೃಶ್ಯವೊಂದರಲ್ಲಿ ಮೈಚಳಿ ಬಿಟ್ಟು ಅಭಿನಯಿಸಿದ್ದರು.

* ಆನಂತರ ಅದೇ ತಿಂಗಳಿನ ಕೊನೆಯಲ್ಲಿ ಹೊಸ ವಷರ್ಾಚರಣೆ ನೆಪದಲ್ಲಿ ಮಲ್ಲಿಕಾ ಶೇರಾವತ್ಳ ಬಿಚ್ಚಾಟದ ವಿರುದ್ಧ ಮುಂಬೈನಲ್ಲಿ ದೂರು ದಾಖಲಾಗಿತ್ತು.
* 2007ರಲ್ಲಿ ರಿಚಡರ್್ ಗೇರೆ ಹಾಗೂ ಶಿಲ್ಪಾಶೆಟ್ಟಿ ನಡುವಿನ ಚುಂಬನ ಸಾರ್ವಜನಿಕ ವೇದಿಕೆಯಲ್ಲಿ ನಡೆದದ್ದು ಸುದ್ದಿಯಾಗಿತ್ತು.* ಇದೇ 2009ರ ಏಪ್ರಿಲ್ನಲ್ಲಿ ನಟ ಅಕ್ಷಯ್ ಕುಮಾರ್ ವಿರುದ್ಧ ಇಂಥದ್ದೆ ಕಂಪ್ಲೆಂಟ್ ದಾಖಲಾಗಿದೆ. ಜೀನ್ಸ್ ಫ್ಯಾಂಟ್ವೊಂದರ ಬಿಡುಗಡೆ ಸಮಾರಂಭದಲ್ಲಿ ಈತ ರ್ಯಾಂಪ್ ಮೇಲೆ ನಡೆಯುತ್ತಾ ಬಂದು ಬಳಿಕ ಮಡದಿಗೆ ಜಿಪ್ ಬಿಚ್ಚುವಂತೆ ಕೇಳಿದ್ದ. ಈ ಚಿತ್ರಸುದ್ದಿ ಆಧಾರಿಸಿ ಆತನ ವಿರುದ್ಧ ಕೇಸು ದಾಖಲಾಗಿದೆ.

ಲೇಟೆಸ್ಟ್ ಆಗಿ ಈಗ ಜಾನ್ ಅಬ್ರಹಾಂ ಸರದಿ.
------------------------------

7.04.2009

ಪಾಂಡೇ ತೆಗೆದ ಖ್ಯಾತೆ......?

ಶಾಂತಿ-ನೆಮ್ಮದಿಯಿಂದಿದ್ದ ಮೈಸೂರು ನಗರದಲ್ಲಿ ಕೆಲ ದಿನಗಳಿಂದ ಅಶಾಂತಿಯದ್ದೇ ಸುದ್ದಿ.
ದುಷ್ಕಮರ್ಿಗಳು ತೆಗೆದ `ಖ್ಯಾತೆ'ಯಿಂದ ಎರಡು ಕೋಮುಗಳ ನಡುವೆ ಮಾರಾಮಾರಿ ನಡೆಯುವಂತಾಗಿದೆ. ಯಾರೋ ಒಂದಿಬ್ಬರ ವೈಯಕ್ತಿಕ ಹಿತಾಸಕ್ತಿಗಾಗಿ ಇಡೀ ಸಮುದಾಯದವರೇ ಪರಿತಪಿಸುವ ಸ್ಥಿತಿ ನಿಮರ್ಾಣವಾಗಿದೆ. ನಡುವೆ ನಮ್ಮ ಸೋ ಕಾಲ್ಡ್ ಪೊಲೀಟಿಕಲ್ ಲೀಡರ್ಸ್ ಅನ್ನಿಸಿಕೊಂಡವರು ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಯತ್ನಿಸುತ್ತಿರುವುದು ಹೇಸಿಗೆ ಮೂಡಿಸುತ್ತಿದೆ. ಘಟನೆ ಯಾವುದೇ ಇರಲಿ, ಮೊದಲಿಗೆ ಇವರ ಟಾಗರ್ೆಟ್ ಆಡಳಿತಾರೂಢ ಸರಕಾರ ಮತ್ತು ಪೊಲೀಸರು.

ಶುಕ್ರವಾರ ಮೈಸೂರಿನ ಜಲದಶರ್ಿನಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಗೋಷ್ಠಿಯಲ್ಲೂ ಇದೇ ವರ್ತನೆ ಪುನಾರಾವರ್ತನೆಗೊಂಡಿತು. ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಎಲುಬಿಲ್ಲದ ನಾಲಿಗೆಯನ್ನು ಹುಚ್ಚಾಪಟ್ಟೆ ಹರಿಯಲು ಬಿಟ್ಟು ತಮ್ಮ ಡಾಶ್ಅನ್ನು ತಾವೇ ಕಳೆದುಕೊಂಡರು. ಈ ಹಂತದಲ್ಲೇ ಮೈಸೂರು ಜರ್ನಲಿಸ್ಟ್ಗಳು ಒಟ್ಟಾಗಿ ಪ್ರದಶರ್ಿಸಿದ ಸಾಮಾಜಿಕ ಕಳಕಳಿಗೆ ಥ್ಯಾಕ್ಸ್.

ಆ ದಿನ ನಡೆದಿದ್ದು ಇಷ್ಟೇ. ....
ಮೈಸೂರಿನ ಪುರಭವನದಲ್ಲಿ ಜು.3ರಂದು ಕಾಂಗ್ರೆಸ್ ಮುಖಂಡರು, ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಿದ್ದರು. ಆದರೆ ಹಿಂದಿನ ದಿನ ನಡೆದ ಕೋಮು ಗಲಭೆಯಿಂದ ಈ ಸಭೆ ಅನಿವಾರ್ಯವಾಗಿ ರದ್ದಾಯಿತು. ಆದರೆ ಪಾಪ ಪ್ರೀಪ್ಲಾನ್ಡ್ ಮಾಡಿಕೊಂಡಿದ್ದ ಮುಖಂಡರಿಗೆ ಮಾಡಲು ಬೇರೆ ಕೇಮೇ ಇರಲಿಲ್ಲ. ಆದ್ದರಿಂದಲೇ ಮೊದಲು ಕ್ಯಾತಮಾರನಹಳ್ಳಿ, ಉದಯಗಿರಿಗೆ ಭೇಟಿ ನೀಡುತ್ತೇವೆ ಎಂಬ ಹೇಳಿಕೆ ಕೊಟ್ಟರು. ಅಷ್ಟರಲ್ಲಿ ನಗರದಲ್ಲಿ ಮೊಕ್ಕಾಂ ಹೂಡಿದ್ದ ಹಿರಿಯ ಪೊಲೀಸ್ ಅಧಿಕಾರಿ, ಘಟನಾ ಸ್ಥಳಕ್ಕೆ ತೆರಳಲು ಇದು ಸೂಕ್ತ ಸಮಯವಲ್ಲ, ದಯವಿಟ್ಟು.....ಕುಳಿತ್ಕೊಳ್ಳಿ ಎಂಬ ಸಂದೇಶ ರವಾನಿಸಿದರು. ಪಾಪಾ ಕಾಂಗ್ರೆಸ್ ನಾಯಕರು, ಬೆಂಗಳೂರಿನಿಂದ ಬೇರೆ ಹೊರಟಾಗಿತ್ತು. ಆದ್ದರಿಂದ ಬೇರೆ ವಿಧಿ ಇಲ್ಲದೆ ಜಲದಶರ್ಿನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಬ್ಲಿಸಿಟಿ ಲಾಸ್ ಮ್ಯಾಚ್ ಮಾಡಿಕೊಳ್ಳಲು ಮುಂದಾದರು.

ಅಲ್ಲೇ ಯಡವಟ್ಟಾಗಿದ್ದು. ..
ಮೈಸೂರಿನ ಉದಯಗಿರಿ, ಕ್ಯಾತಮಾರನಹಳ್ಳಿ ಪ್ರದೇಶಗಳ ಜಿಯಾಗ್ರಫಿಯಾಗಲಿ ಅಲ್ಲಿ ವಾಸಿಸುವ ಜನಗಳ ಬಯಾಗ್ರಫಿಯಾಗಲಿ ಅರಿಯದ ದೇಶಪಾಂಡೆ ಸಾಹೇಬರು, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿರುವವರಂತೆ ಏಕಾಏಕಿ ಭಾಷಣ ಶುರುವಿಟ್ಟರು. ಥೇಟ್ ಪುಡಾರಿ ಸ್ಟೈಲ್ನಲ್ಲಿ ಓತಾಪ್ರೋತವಾಗಿ ವಾಗ್ದಾಳಿ ಹರಿಯಬಿಟ್ಟರು. ಘಟನೆ ನಿಯಂತ್ರಿಸಲು ಜಿಲ್ಲಾಡಳಿತ ವಿಫಲವಾಗಿದೆ, ಪೊಲೀಸರು ಕಾನೂನು ಕೈಗೆತ್ತಿಕೊಂಡಿದ್ದಾರೆ ಎಂಬ ಅಣಿಮುತ್ತು ಸಹ ಉದುರಿಸಿದರು. ಆಗಲೇ ಮೀಡಿಯಾದವರು ಸಹನೆ ಕಳೆದುಕೊಂಡದ್ದು.

ಗಲಭೆ ನಡೆಸುತ್ತಿದ್ದವರನ್ನು ನಿಯಂತ್ರಿಸಲು ಪೊಲೀಸರು ಏನು ಮಾಡಬೇಕಿತ್ತು..?
ಎಂಬ ಪ್ರಶ್ನೆ ದೇಶಪಾಂಡೆ ಬಾಯಿ ಮುಚ್ಚಿಸಿತು.ದೇಶಪಾಂಡೆ ನಮ್ಮ ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ಮೆಟಿರಿಯಲ್ಲು. (ಇದಕ್ಕೆ ಅವಶ್ಯಕವಾದ ಫೈನ್ಯಾಷಿಯಲ್ ಎಲಿಜಿಬಿಲಿಟಿ ಅವರತ್ರ ಇದೆ) ಇಂಥ ವ್ಯಕ್ತಿ ಈ ರೀತಿ ಲಂಗು ಲಗಾಮಿಲ್ಲದೆ ನಾಲಿಗೆ ಹರಿಯಬಿಡುತ್ತಿದ್ದುದನ್ನು ನೋಡಿದರೆ ಭವಿಷ್ಯ ಮಂಕಾಗಿ ಕಾಣಿಸುತ್ತದೆ. ಇನ್ನು ಎಂಥೆಂಥ ರಾಜಕಾರಣಿಗಳನ್ನು ಈ ರಾಜ್ಯ ನೋಡಬೇಕಪ್ಪ ಅನ್ನೋ ಆತಂಕ ಎದುರಾಗುತ್ತದೆ.

ಪಾಂಡೇ ಸಾಹೇಬರ ನಂತರ ಎಕ್ಸ್ ಡಿಪ್ಯೂಟಿ ಸಿಂ ಸಿದ್ದ್ರಾಮಣ್ಣ ಮಾತು ಶುರುವಿಟ್ಟುಕೊಂಡರು. ಪಕ್ಷದ ಅಧ್ಯಕ್ಷರು ಮಾಡಿದ ಆರೋಪಕ್ಕೆ ಪ್ರೆಸ್ನವರು ಬ್ರೇಕ್ ಹಾಕಿ ಪಚೀತಿ ಮಾಡಿದ್ದನ್ನು ಮುಗುಮ್ಮಾಗಿಯೇ ನೋಡಿಕೊಂಡಿದ್ದರು. ಆದ್ದರಿಂದಲೇ ದೇಶಪಾಂಡೆ ಅವರ ಅಭಿಪ್ರಾಯವನ್ನೇ ಕೊಂಚ ಸಾಫ್ಟ್ ಮ್ಯಾನರ್ನಲ್ಲಿ ಹೇಳುವ ಮೂಲಕ ಟಿಪಿಕಲ್ ಕಾಂಗ್ರೆಸ್ಸಿಗ ಎಂಬುದನ್ನು ಪ್ರೂವ್ ಮಾಡಿದರು. ಈ ಮುಖಂಡರ ದೊಂಬರಾಟದಿಂದ ಬೇಸತ್ತಿದ್ದ ನಾವು ಸಿದ್ದು ಮಾತು ನಿಲ್ಲಿಸು ತಿದ್ದಂತೆ ಜಾಗ ಖಾಲಿ ಮಾಡಿದೇವು. ವಿಪರ್ಯಾಸ ಎಂದ್ರೆ, ನಮ್ಮ ಎಕ್ಸ್ ಡಿಪ್ಯೂಟಿ ಸಿಎಂ ಇದನ್ನು ಹಳದಿ ಬಣ್ಣದಿಂದ ನೋಡಿದ್ದು. ಬಟ್ ವಿ ಕಾಂಟ್ ಡೂ ನಥಿಂಗ್...




(ವಿ.ಸೂ- ಬರಹಕ್ಕೂ ಬಿಸ್ಕೆಟ್ ತಿನ್ನುವ ಈ ಚಿತ್ರಕ್ಕೂ ಸಂಬಂಧವಿಲ್ಲ. ಗೆಳಯ ಗಿರೀಶ್ನ ಈ ಅಪರೂಪದ ಚಿತ್ರ ತೆಗೆದವರು ಕ್ಯಾಮೆರಾಮನ್ ಸುಧೀಂದ್ರ ಕುಮಾರ್ )

--------------------------------------------------