2.28.2009

ಅಡಿ ಮಚ್ಚನಾ ಪಾರಡಿ..........






ಹಾಯ್ ಫ್ರೆಂಡ್ಸ್..ಇ ದಿನದ ಬ್ಲಾಗ್ ಸಿಂಪ್ಲಿ ಸ್ಪೆಷಲ್. ಯಾಕೆ ಗೊತ್ತ..? ಮೈಸೂರು ಜಿಲ್ಲೆಯ ಸೆಲೆಬ್ರಿಟಿಯೊಬ್ಬರ ಖಾಸ ಜೀವನದ ಬಗ್ಗೆ ಹೇಳುವ ಅವಕಾಶ ಸಿಕ್ಕಿರೋದಕ್ಕೆ ಹಾಗೂ ಅಂಥ ಒಂದು ಫೋಟೋ ನಿಮಗಾಗಿ ತೋರಿಸುತ್ತಿರುವುದಕ್ಕೆ. ಅವರೇ ಮಣಿವಣ್ಣನ್, ಅಲಿಯಾಸ್ ಅಂದಕಾಲತ್ತಿಲೇ ಡೆಮಾಲಿಷನ್ ಮ್ಯಾನ್.
ಅರೇ ಇದೇನಿದು ಪಕ್ಕಾ ತಮಿಳ್ ಸ್ಟೈಲ್ನಲ್ಲಿ ಸ್ಟೆಪ್ ಹಾಕ್ತಿದಾರಲ್ಲ. ಯಾರಾದ್ರು ನೋಡಿದ್ರೇ ಏನ್ ಗತಿ ಅನ್ನೋ ಭಯ ಬೇಡ. `9' ಚಿಂತೆಯಂತೂ ಇಲ್ವೆ ಇಲ್ಲ. ಬಿಕಾಸ್ ಇದು ನಡೆದಿರೋದು ದೂರದ ದಿಲ್ಲಿಯಲ್ಲಿ. ಫೆ.16ರಿಂದ ಮೂರು ದಿನಗಳ ಕಾಲ ದಿಲ್ಲಿಯಲ್ಲಿ ಮಣಿವಣ್ಣನ್ರ ಮಚ್ಚಾ ಅಲಿಯಾಸ್ ಬ್ರದರ್ ಇನ್ ಲಾ ಸಾಕೇತ್ ಚೌಹಾಣ್ ಹಾಗೂ ನಿಖಿತಾರ ಮ್ಯಾರೇಜ್ ಅರೇಂಜ್ ಆಗಿತ್ತು. ಈ ಸಮಾರಂಭದಲ್ಲಿ ಭಾಗವಹಿಸಿದ್ದ ಅವರ ಕುಟುಂಬದ ಚೊಚ್ಚಲ ಸನ್ ಇನ್ ಲಾ ಅಲಿಯಾಸ್ ಮಾಪಿಳೈ ಅಲಿಯಾಸ್ ಅಳಿಯ ಮಣಿ ಈ ರೀತಿ ಮಸ್ತ್ ಮಜಾ ಮಾಡಿದ್ದಾರೆ. ಸೌತ್ ದಿಲ್ಲಿಯ ಮಲ್ಲು ಫಾರ್ಮನಲ್ಲಿ ನಡೆದ ಮೂರು ದಿನಗಳ ಮ್ಯಾರೇಜ್ ಸೆಲೆಬ್ರೇಷನ್ನಲ್ಲಿ ಮಣಿ ಮಿಂಚಿದ್ದು ಹೀಗೆ.
* ಉತ್ತರ ದೃವಧಿಂ....ದಕ್ಷಿಣ ದೃವಕೂ........
ಮೈಸೂರು ನಗರ ಪಾಲಿಕೆ ಆಯುಕ್ತರಾಗಿ ವಗರ್ಾವಣೆಗೊಂಡು ಬಳಿಕ ಅದೇ ಅವಧಿಯಲ್ಲಿ ಮುಡಾ ಆಯುಕ್ತರಾಗಿ ನಂತರ ಜಿಲ್ಲಾಧಿಕಾರಿಯಾಗಿ ಇಲ್ಲೇ ನೆಲೆ ನಿಂತ ಮೈಸೂರು ಅಧಿಕಾರಿಗಳ ಪೈಕಿ ಬಹುಶಃ ಮಣಿ ಮೊದಲಿಗರು. ಇಂತಿರ್ಪ ನಮ್ಮ ಡಿಸಿ ಮೂಲತಃ ತಮಿಳುನಾಡಿನವರು. ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಕನರ್ಾಟಕದಲ್ಲಿ ಸೇವೆ ಅರಸಿಕೊಂಡರು. ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಚುನಾವಣಾಧಿಕಾರಿಯಾಗಿ ಮಣಿ ನಿರ್ವಹಿಸಿದ ಕಾರ್ಯ ಮೆಚ್ಚುಗೆ ಪಡೆದದ್ದು ತಿಳಿದದ್ದೆ. ಸದಾ ಗಂಭೀರ ವದನರಾಗಿರುವ ಮಣಿವಣ್ಣನ್ ಸಹ ದಶಕಗಳ ಹಿಂದೆ `ಕಾದಲ್ನ್' ಆಗಿದ್ದವರೇ.
ಬಿಹಾರದಲ್ಲಿನ `ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ' (ಸೇಯೈಲ್)ಕಂಪನಿಯಲ್ಲಿ ಮಣಿವಣ್ಣನ್ ಕೆಲಸ ಮಾಡುತ್ತಿದ್ದಾಗಲೇ ಈ ಪ್ರೇಮ ಪ್ರಕರಣ ನಡೆದದ್ದು. ದಿಲ್ಲಿಯ ಐಐಟಿ ಸ್ಟೂಡೆಂಟ್ ಆಗಿ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ವಂದನಾ ಚೌಹಾಣ್, ಮಣಿ ಮನಸ್ಸನ್ನು ಕದ್ದರು. ಬಳಿಕ ಇದು ವರ್ಷದಲ್ಲೇ ಅವರನ್ನು `ಸಪ್ತಪದಿ' ತುಳಿಯುವಂತೆ ಮಾಡಿತು.
ಐಎಎಸ್ ತರಬೇತಿ ಪೂರ್ಣಗೊಂಡ ಬಳಿಕ ಮಣಿವಣ್ಣನ್ ಕನರ್ಾಟಕದಲ್ಲಿ ನೆಲೆ ಕಂಡುಕೊಂಡರು. ಸೋ ಮಡದಿ ವಂದನಾ ಸಹ ಪತಿ ಹಾದಿ ಹಿಡಿದರು. ಆರಂಭದಲ್ಲಿ ಚಿಕ್ಕಮಗಳೂರಿನ ರೆಸಿಡೆನ್ಸಿಯಲ್ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರಿಬ್ಬರ ಏಕಮೇವ ಕುಮಾರನೇ `ಅಮೋಘ'.
ತಮಿಳುನಾಡಿನ ಮೂಲದ ಮಣಿವಣ್ಣನ್ ಪ್ರೇಮಿಸಿದಾಕೆ ಉತ್ತರ ಭಾರತದವರು. ಮದುವೆಯಾಗಿ ದಶಕಗಳು ಸಮೀಪಿಸುತ್ತಿರುವ ವೇಳೆಗೆ ಮತ್ತೆ ಅಂಥದ್ದೆ ಒಂದು ಸಮಾರಂಭದಲ್ಲಿ ಭಾಗವಹಿಸಿ `ಫ್ಲಾಶ್ ಬ್ಯಾಕ್' ಸವಿಯುವ ಲಕ್.

(ವಿ.ಸೂ: ಮಣಿ ಪರ್ಸನಲ್ ಮ್ಯಾಟರ್ ಬಗ್ಗೆ ಇನ್ಫಾರ್ಮೇಷನ್ ನೀಡಿ ಸಹಕರಿಸಿದ ಎಚ್ಎಂಎ ಅಲಿಯಾಸ್ `ಬಿಬಿ'ಗೆ `ರುಂಭಾ ನಂಡ್ರಿ')

2 comments:

  1. Oops! Media friends can make mundane things so much interesting! Never knew that few marriage pictures can make such a humorous passage!

    Thank God that the video was not shared! Else, my 'dancing' skills would have come to light! (Its another matter that in Mysore,many a times one has to 'walk tight rope', keep 'juggling', and 'balance everything'!!)

    Best wishes to all!

    ReplyDelete
  2. hi sir tamma blognalliruv kelvu lekan odide chennagive

    ReplyDelete