3.20.2009

ಗೋವಾದಲ್ಲಿ 009

ಇದು ಸ್ಯಾಂಪಲ್ ಫೋಟೋ...



ಹಾಯ್.. ಯಾಕೋ ಗೊತ್ತಿಲ್ಲ. ಡಿಸಿ ಮಣಿವಣ್ಣನ್ ಡ್ಯಾನ್ಸ್ ಸಿಕ್ವೆನ್ಸ್ ಪಬ್ಲಿಶ್ ಮಾಡಿದ ಬಳಿಕ ಅಂತದ್ದೇ ಸುಮಾರು ಫೋಟೋಗಳು ಸಿಗುತ್ತಿವೆ. ಆದರೆ ಬ್ಲಾಗ್ಗೆ ಹಾಕಲು ಆಗಿರಲಿಲ್ಲ. ಆದರೆ ಈಗ `ನಮ್ಮ ಟೀಂ' ಹುಡುಗರು ಗೋವಾ ಪ್ರವಾಸ ಯಶಸ್ವಿಯಾಗಿ ಮುಗಿಸಿ ಬಂದಿದ್ದಾರೆ. ಜತೆಗೆ ಒಂದಷ್ಟು ಫೋಟೋಗಳನ್ನು ತೆಗೆದಿದ್ದಾರೆ. ಈ ಎಲ್ಲಾ ಚಿತ್ರಗಳನ್ನು ಮೊನ್ನೆ ಟೈಮ್ಸ್ ಕಚೇರಿಯಲ್ಲಿ ವೀಕ್ಷಿಸುವ ಅವಕಾಶ ನನ್ನದಾಗಿತ್ತು.
ಗೋವಾ ಪ್ರವಾಸಕ್ಕೆ ತೆರಳಿದ್ದ `ನಮ್ ಟೀಂ' ಹುಡುಗರೆಲ್ಲಾ ಸ್ಟಿಲ್ ಬ್ಯಾಚುಲರ್ಸ್. ಇವರಲ್ಲಿ ಜರ್ನಲಿಸ್ಟ್, ಲಾಯರ್, ಲೆಕ್ಚರರ್ ಅನ್ನೋ ಬೇಧ ವಿಲ್ಲದೆ ಎಲ್ಲರೂ ಸೇರಿದ್ದು ವಿಶೇಷ. ಒಟ್ಟಾರೇ ಇಂಡಿಯಾದ ಸ್ಲೋಗನ್ ಥರ ವಿವಿಧತೆಯಲ್ಲಿ ಏಕತೆ ಅನ್ನೋ ಹಾಗಿದೆ ಈ ತಂಡ.
ಈ ಕಾರಣದಿಂದಲೇ ಟ್ರಿಪ್ನ ಸಂಪೂರ್ಣ ಚಿತ್ರಗಳನ್ನು ಸೆನ್ಸಾರ್ ಮಾಡಲಾಗಿದೆ. ಸಿನಿಯರ್ ಜರ್ನಲಿಸ್ಟ್ ಮಿ.ಮರಮಕಲ್ ಖುದ್ದು ಈ ಫೋಟೋಗಳನ್ನು ನೋಡಿದ್ದು ಟೀಂ ಹುಡುಗರ ಸಂತಸಕ್ಕೆ ಕಾರಣವಾಯಿತು. ಜತೆಗೆ ಮರಮಕಲ್ ಅವರ ನೇಟಿವ್ ಪ್ಲೇಸ್, ಬಹು ಹೆಮ್ಮೆಯ ಜಿಲ್ಲೆಯಾದ ಉತ್ತರ ಕನರ್ಾಟಕದ ಜೂನಿಯರ್ ಜರ್ನಲಿಸ್ಟ್ ಒಬ್ಬರ ನಯಾ ಅವತಾರಗಳನ್ನು ಈ ಫೋಟೋ ಬಟಾ ಬಯಲು ಮಾಡಿದ್ದು ವಿಪರ್ಯಾಸ. ಈ ಚಿತ್ರಗಳನ್ನು ನೋಡಿದ ಮರಮಕಲ್ ಅರೆ ಕ್ಷಣ ಬೆಸ್ತು. ಇಂಥ ಅವತಾರಗಳಲ್ಲಿ ನಮ್ಮೂರ ಹೈದ ಇರಲು ಸಾಧ್ಯವೆ ಎಂದು ಮೂಗಿನ ಮೇಲೆ ಬೆರಳಿಟ್ಟು ಯೋಚನೆಗೆ ಶುರುವಿಟ್ಟುಕೊಂಡದ್ದು ಹೌದು.
ಪಾಪ, ಪ್ರವಾಸಕ್ಕೆಂದು ಆತನನ್ನು ಕರೆದುಕೊಂಡು ಹೋದ ಮೇಲೆ ಸೈಲೆಂಟಾಗಿ ಇರಲಿಲ್ಲ ಎಂದು ಈ ರೀತಿ ಸಾಕ್ಷಿ ಸಮೇತ ದೂರಿದ್ದು `ಟೀಂ ಹುಡುಗರ' ಒಗ್ಗಟ್ಟಿನ ಬಗ್ಗೆ ಅನುಮಾನ ಮೂಡಿಸುತ್ತಿವೆ.
ಒಟ್ಟಾರೆ ಈ ಪ್ರವಾಸ ಕಥಾನ ಕೇಳಿ, ವೀಕ್ಷಿಸಿದ ನಂತರ ಮರಮಕಲ್, ಇಪ್ಪತ್ತು-ಮುವ್ವತ್ತು ದಶಕಗಳ ಹಿಂದೆ ಜಾರಿದ್ದು ಮಾತ್ರ ಸುಳ್ಳಲ್ಲ. ಕುರುಚಲು ಗಡ್ಡದ, ಬಸವ ಅನುಯಾಯಿಯ ಮುಖದ ಮೇಲೆ ಮೂಡುತ್ತಿದ್ದ ಹುಸಿನಗೆ ಈ ಅನುಮಾನಕ್ಕೆ ಪೂರಾವೆ ಒದಗಿಸಿದವು. ಇಂಥ ಒಂದು ಅವಕಾಶ ಮಾಡಿಕೊಟ್ಟ `ನಮ್ಟೀಂ' ಸದಸ್ಯರಿಗೆ ಮನಸ್ಸಿನಲ್ಲೇ ಥ್ಯಾಂಕ್ಸ್ ಹೇಳಿದ್ರು ಆಶ್ಚರ್ಯವಿಲ್ಲ.

ಡೊಂಟ್ ಕೇರ್ ಫಾರ್ ಸಮ್ಮರ್....


ಈಗ ಎಲ್ಲೆಲ್ಲೂ ಬೇಸಿಗೆಯದ್ದೇ ಕಾಟ. ಆದರೆ ಮೈಸೂರಿನ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಮಾತ್ರ ಈ ತಾಪ ತಟ್ಟಿಲ್ಲ. ಸಮ್ಮರ್ನಲ್ಲೂ ಇಲ್ಲಿನ ಪ್ರಾಣಿಗಳು ಸಖತ್ ಆಹ್ಲಾದಕರವಾಗಿವೆ. ಆ ಮೂಲಕ ಸಂಗ್ರಹಾಲಯದ ಆಥರ್ಿಕ ಸಂಗ್ರಹವನ್ನು ಹೆಚ್ಚಳಗೊಳಿಸಿದೆ.
ಮೈಸೂರು ನಗರದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಶ್ರೀ ಚಾಮರಾಜೇಂದ್ರ ಮೃಗಾಲಯವೂ ಒಂದು. ದಶಕಗಳ ಹಿಂದೆ ಮೈಸೂರಿನ ಅರಸರು ಪ್ರಾರಂಭಿಸಿದ ಈ ಪ್ರಾಣಿ ಸಂಗ್ರಹಾಲಯ ಇಂದು ರಾಜ್ಯ, ದೇಶಗಳ ಗಡಿ ದಾಟಿ ಹೆಸರುಗಳಿಸಿದೆ. ಅದೇ ರೀತಿ ಕೋಟ್ಯಾಂತರ ರೂ.ಗಳ ವಹಿವಾಟು ನಡೆಸಲು ಈ ಪ್ರಾಣಿಗಳು ಪರೋಕ್ಷವಾಗಿ ಸಹಕಾರಿಸಿವೆ . ಈ ಸತ್ಯ ಅರಿತಿರುವ ಇಲ್ಲಿನ ಆಡಳಿತ ವರ್ಗ, ಪ್ರಾಣಿ ಪಕ್ಷಿಗಳ ಸೇವೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ.
ಬೇಸಿಗೆಯ ಈ ಸುಡು ಬಿಸಿಲಿನ ಬೇಗೆಯಿಂದ ವನ್ಯಜೀವಿಗಳಿಗೆ ಯಾವುದೇ ಅಡ್ಡ ಪರಿಣಾಮ ಉಂಟಾಗದಿರಲಿ ಎಂಬ ಕಾರಣಕ್ಕೆ ನೀರು ಹನಿಗಳ ಸ್ಪ್ರಿಂಕ್ಲರ್ಗಳನ್ನು ಅಳವಡಿಸಿದ್ದಾರೆ. ಇದರಿಂದಾಗಿ ಇಲ್ಲಿನ ಜಿರಾಫೆ, ಕಾಡೆಮ್ಮೆ, ಕರಡಿ ಮುಂತಾದ ಪ್ರಾಣಿಗಳು ಆಹ್ಲಾದಕರವಾಗಿ ನೀರಾಟವಾಡುತ್ತ ಬೇಸಿಗೆ ದಗೆಯನ್ನು ಮರೆಯುತ್ತಿವೆ.
ಸ್ಪ್ರಿಂಕ್ಲರ್ಗಳ ಮೂಲಕ ನೀರ ಹನಿಗಳು ಮಳೆ ರೂಪದಲ್ಲಿ ಸುರಿಯುತ್ತಿರುವ ಕಾರಣ ಈ ಪ್ರದೇಶವೆಲ್ಲ ಬೇಸಿಗೆಯಲ್ಲೂ ಹಸಿರಿನಿಂದ ಕೂಡಿದೆ. ಪರಿಣಾಮ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಬೇಸಿಗೆಯ ಝಳ ತಟ್ಟುತ್ತಿಲ್ಲ. ಇದೇ ರೀತಿ ಇಲ್ಲಿನ ಮತ್ತೊಂದು ಆಕರ್ಷಣೆ ಸ್ಥಳವಾದ ಆನೆ ಮನೆಯಲ್ಲೂ ಗಜರಾಜನಿಗೆ ನಿತ್ಯ ಜಳಕ ತಪ್ಪಿದ್ದಲ್ಲ. ಆವರಣದ ಮಧ್ಯದಲ್ಲಿರುವ ಬೃಹತ್ ತೊಟ್ಟಿಯಲ್ಲಿ ಆನೆಗಳು ಗುಂಪುಗುಂಪಾಗಿ ಬಂದು ಸಾಮೂಹಿಕ ಸ್ಥಾನಕ್ಕೆ ಅಣಿಯಾಗುವ ದೃಶ್ಯ ಆಕರ್ಷಣೀಯವಾಗಿದೆ. ಇಲ್ಲಿನ ಪ್ರಾಣಿ ಪಕ್ಷಿಗಳ ಇಂಥ ಆಕರ್ಷಣೆಯೇ ಸಂಗ್ರಹಾಲಯದ ಆಧಾಯ ಹೆಚ್ಚಳಕ್ಕೆ ಮೂಲ.



ಮೃಗಾಲಯದ ಪ್ರವೇಶ ದ್ವಾರದಿಂದ ಕಳೆದ ವರ್ಷ ಒಟ್ಟು 4.59 ಕೋಟಿ ರೂ. ಹಣ ಸಂಗ್ರಹಿಸಲಾಗಿತ್ತು. ಜತೆಗೆ ಪ್ರಾಣಿ ದತ್ತು ಯೋಜನೆಯಡಿ ಸಹ ಕೆಲ ಲಕ್ಷ ರೂ.ಗಳು ಸಂಗ್ರಹಗೊಂಡಿದ್ದವು . ಆದರೆ ಈ ವರ್ಷ ಮಾಚರ್್ ಅಂತ್ಯಗೊಳ್ಳುವ ಮೊದಲೇ ಪ್ರವೇಶ ದ್ವಾರದ ಮೂಲಕ 4.89 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ. ಜತೆಗೆ ದತ್ತು ಸ್ವೀಕಾರ ಯೋಜನೆಯಡಿ ಅಂದಾಜು 30 ಲಕ್ಷ ರೂ. ಕ್ರೂಡಿಕರಿಸಲಾಗಿದೆ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಈ ವರ್ಷದ ಹಣ ಸಂಗ್ರಹ ದಾಖಲೆ ಪ್ರಮಾಣದ್ದಾಗಲಿದೆ ಎಂಬುದು ಕಾರ್ಯನಿವರ್ಾಹಕ ನಿದರ್ೇಶಕ ವಿಜಯರಂಜನ್ ಸಿಂಗ್ ಅವರ ಅಭಿಲಾಷೆ. ಸೆ ಗುಡ್ ಲಕ್ ಟು ಹಿಮ್...
---------------------------

3.13.2009

* ಡೇರಾ ಸಂಘಟನೆಯ ಡೇರ್ನೆಸ್.....



ಪಂಜಾಬ್ ಮೂಲದ ದೇರಾ ಸಚ್ಚಾ ಸೌಧ ಸಂಘಟನೆ ಕೆಲ ತಿಂಗಳುಗಳಿಂದ ಸುದ್ದಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಸಂಘಟನೆ ಮುಖಂಡ ಗುರುಜೀ ರಾಮ್ ರಹೀಂ ಸಿಂಗ್
ಅವರ
ಮೇಲೆ ನಡೆಸಿದ ಕೊಲೆ ಯತ್ನ. ಸಿಖ್ ಧಮರ್ಿಯರಲ್ಲೇ ಒಂದು ಪಂಗಡ ಈ ಸಂಘಟನೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ. ಈ ಕಾರಣಕ್ಕಾಗಿಯೇ ಕೊಲೆ
ಯತ್ನ ನಡೆಸಲಾಗಿತ್ತು. ಆ ವೇಳೆಯಲ್ಲೇ ರಾಮ್ ರಹೀಂ ಸಿಂಗ್, ವಾಸ್ತವ್ಯಕ್ಕಾಗಿ ಆರಿಸಿಕೊಂಡಿದ್ದು ಮೈಸೂರು ತಾಲೂಕಿನ ನಾಗನಹಳ್ಳಿ ಸಮೀಪದ ಆಶ್ರಮವನ್ನು.
ಈಗ ಮತ್ತೆ ಈ ಆಶ್ರಮ ಸುದ್ದಿಯಲ್ಲಿದೆ. ಕಾರಣ ತಾತ್ಕಾಲಿಕ ವಾಸ್ತವ್ಯಕ್ಕಾಗಿ ರಾಮ್ ರಹೀಂ ಸಿಂಗ್ ಆಗಮಿಸಿರುವುದು.

ಕಳೆದ ಎರಡು ದಿನಗಳಿಂದ ಮೈಸೂರಿನಲ್ಲಿ ಸತ್ಸಂಗ ನಡೆಸಿಕೊಡುತ್ತಿದ್ದಾರೆ. ಜತೆಗೆ ಮೆಥೆಡ್ ಆಫ್ ಮೆಡಿಟೇಷನ್
ಕಲಿಸುವ ಮೂಲಕ ಯೋಗದ ಮಹತ್ವ ತಿಳಿಸುತ್ತಿದ್ದಾರೆ. ಈ ರೀತಿ ಯೋಗ ಕಲಿತು ಅದರಿಂದ ಪ್ರಯೋಜನ ಪಡೆದ
ಅನೇಕರು ಅವರ ಅನುಯಾಯಿಗಳಾಗಿದ್ದಾರೆ.
ಈ ಪೈಕಿ ರಾಜಸ್ತಾನ ಮೂಲದ ಇಂಗ್ಲಿಷ್ ಪ್ರಾಧ್ಯಾಪಕಿ ಮಿಸ್ ಪೂನಂ ಒಬ್ಬರು. ಈ ಕಾರಣಕ್ಕಾಗಿಯೇ ಆಕೆ ಈಗ ಗುರುಜೀ
ಅನುಯಾಯಿಯಾಗಿದ್ದು ಸ್ವಯಂ ಕಾರ್ಯಕತರ್ೆಯಾಗಿ ಮೈಸೂರಿನ ಆಶ್ರಮದಲ್ಲಿ ಸೇವೆ ಮಾಡುತ್ತಿದ್ದಾರೆ. ಇದೇ ರೀತಿ
ಅನೇಕ ಮಹಿಳೆಯರು ಸುಡು ಬಿಸಿಲನ್ನು ಲೆಕ್ಕಿಸದೆ ಟೊಂಕಕಟ್ಟಿ ಕಟ್ಟಡ ನಿಮಾ ಕಾರ್ಯದಲ್ಲಿ ನಿರತರಾಗಿದದ್ದು ಆಶ್ಚರ್ಯದ ಸಂಗತಿ.
ಮತ್ತೊಂದು ವಿಶೇಷ ಎಂದರೆ ಜಗತ್ತಿನಲ್ಲೇ ಅತ್ಯಂತ ಕಿರಿಯದಾದ ಸಂಚಾರಿ ಶಸ್ತ್ರಚಿಕಿತ್ಸಾ ಘಟಕ ಒಂದನ್ನು ಸಂಘಟನೆ ಹೊಂದಿರುವುದು .
ಪ್ರಪಂಚದಲ್ಲೇ
ಪ್ರಥಮ ಎನ್ನ ಬಹುದಾದ ಅತ್ಯಂತ ಕಿರಿಯದಾದ ಸಂಚಾರಿ ಶಸ್ತ್ರಚಿಕಿತ್ಸಾ ಘಟಕ ಇದು. ನೋಡಲು ಸಾಧಾರಣ ಜೀಪ್ನಂತೆ ಕಾಣುವ ಈ ವಾಹನದಲ್ಲಿ ಎಲ್ಲರೀತಿಯ ಅಪರೇಷನ್ ಮಾಡಬಹುದು. ಅಷ್ಟೊಂದು ಅತ್ಯಾಧುನಿಕ ಸವಲತ್ತುಗಳನ್ನು ಒದಗಿಸಲಾಗಿದೆ. ಈ ಕಾರಣದಿಂದಲೇ ಲಿಂಮ್ಕಾ ಬುಕ್ ಆಫ್ ರೆಕಾದ್ಸರ್ನಲ್ಲಿ ಸಹ ಇದು ಹೆಸರು ದಾಖಲಿಸಿದೆ.


ಈ ಆಶ್ರಮಕ್ಕೆ ಭೇಟಿ ನೀಡಿದಾಗ ನನಗೆ ಅನೇಕ ಅಂಶಗಳು ಕುತೂಹಲ ಮೂಡಿಸಿದವು. ಇಬ್ಬ ಜರ್ನಲಿಸ್ಟ್ ಆಗಿ ನೋಡಿದಾಗ ಅನುಮಾನ ಮೂಡುವುದು ಸಹಜ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಜನಸಾಮಾನ್ಯರು ಮಾತ್ರ ವಲ್ಲದೆ ಹೈಲಿ ಎಜುಕೇಟೆಡ್ ಮಂದಿ ಸಹ ಅನುಯಾಯಿಗಳಾಗಿದುದ್ದು ವಂಡರ್ ಎನಿಸಿತು. ಜತೆಗೆ ಮತ್ತೊಂದು ಪ್ರಮುಖ ವಿಷ್ಯ ಅಂದ್ರೆ, ಸತ್ಸಂಗದಲ್ಲಿ ಭಾಗವಹಿಸು ಮಂದಿ ತಮ್ಮ ಅನೇಕ ಸಮಸ್ಯೆಗಳನ್ನು ಗುರುಜೀ ಬಳಿ ಕೇಳಿಕೊಂಡು ಪರಿಹಾರಕ್ಕೆ ಯತ್ನಿಸುತ್ತಾರೆ. ಮಾತ್ರವಲ್ಲದೇ ದೂರ ವಿದೇಶಗಳಿಂದಲೂ ದೂರವಾಣಿ ಮೂಲಕ ಸಮಸ್ಯೆ ಹೇಳಿಕೊಳ್ಳುವವರು ಇದ್ದಾರೆ. ನಾನು ಹೋಗಿದ್ದ ಸಮಯದಲ್ಲಿ ಕೆನಡಾದಿಂದ ಗೃಹಿಣಿ ಪೋನ್ ಮಾಡಿದ್ದರು.
ಸತ್ಸಂಗದ ಬಳಿಕ ಮಹಿಳೆಯರು ಖುದ್ದು ತಾವೇ ಕಟ್ಟಡ ನಿಮರ್ಾಣ ಕೆಲಸವನ್ನು ಮಾಡುತ್ತಾರೆ. ಆಶ್ರಮದ ಕಾಂಪೌಂಡ್
ನಿಮರ್ಿಸುತ್ತಿರುವ ಈ ಮಹಿಳೆಯರು, ಬಲವಂತವಾಗಿ ಈ ಕೆಲಸ ಮಾಡುತ್ತಿಲ್ಲ. ಸ್ವಯಂ ಪ್ರೇರಣೆಯಿಂದ ಇದರಲ್ಲಿ
ತೊಡಗಿದ್ದೇವೆ. ಇದರಲ್ಲೇ ಸಂತೋಷ ಕಾಣುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೂ ಈ ಗುರುಜಿ ಬಗ್ಗೆ ಸಿಖ್
ಸಮುದಾಯದಲ್ಲೇ ಒಂದು ಪಂಗಡ ವಿರೋಧಿಸುತ್ತದೆ. ಈ ಬಗ್ಗೆ ಅನುಯಾಯಿಗಳಲ್ಲಿ ಪ್ರಶ್ನಿಸಿದಾಗ, ಗುರುಜಿ ಮಾಂಸ,
ಮಧ್ಯ ಸೇವನೆ ಮಾಡಬೇಡಿ ಎಂದು ಸಲಹೆ ನೀಡುತ್ತಾರೆ. ಇದನ್ನು ಅವರ ಲಕ್ಷಾಂತರ ಮಂದಿ ಫಾಲೋಯರ್ಸ್ಗಳು
ಅನುಸರಿಸುತ್ತಾರೆ. ಇದರಿಂದ ವೈನ್ಶಾಪ್ನವರಿಗೆ ಲಾಸ್ತಾನೆ. ಆದ್ದರಿಂದ ಈ ಸಂದರ್ಭದಲ್ಲಿ ಲಿಕ್ಕರ್ ಲಾಭಿ ಗುರುಜಿ ವಿರುದ್ಧ
ಕೆಲಸ ಮಾಡುತ್ತದೆ. ಇದು ಜಸ್ಟ್ ಒಂದು ಉದಾಹರಣೆ ಮಾತ್ರ. ಇಂಥದ್ದೆ ಅನೇಕ ಮಾಫಿಯಗಳು ಪಂಜಾಬ್ನಲ್ಲಿ ಕಾರ್ಯ
ನಿರ್ವಹಿಸುತ್ತಿವೆ. ಆದ್ದರಿಂದಲೇ ಲಕ್ಷಾಂತರ ಮಂದಿಯ ಆರಾಧ್ಯ ದೈವವಾಗಿರುವ ಗುರುಜಿಗೆ ಝಡ್ ಕೆಟಗರಿ ಸೆಕ್ಯೂರಿಟಿ
ಒದಗಿಸಿರುವುದು ಎಂದು ಸಮಜಾಯಿಸಿ ಕೊಡುತ್ತಾರೆ ಮಿಸ್ ಪೂನಂ.
----------------------

3.06.2009


೫೦೦ ರುಪಾಯಿಗಳು..



ಯೂ ಟ್ಯೂಬ್ ನಲ್ಲಿ ನೋಡಿದ ಒಂದು ವೀಡಿಯೊ ಈ ಬರಹಕ್ಕೆ ಕಾರಣ..
೫೦೦ ರುಪಾಯಿ ಸಿಕ್ಕರೆ ನಾವು ಏನು ಮಾಡ್ತಿವಿ ಅನ್ನೋದು ಈ ವೀಡಿಯೊದ ಸಾರಾಂಶ ..


ಇದು ನೋಡಿದ್ ಮೇಲೆ ೫೦೦ ರುಪಾಯಿ ಉಳಿಸೋ ಒಂದು ಸುಲಭ ಐಡಿಯಾ ಬಂತು... ಅದುನ್ನ ನಿಮ್ ಹತ್ರ ಶೇರ್ ಮಾಡ್ತಿನಿ.. ನಿಮಗೂ ಉಪಯೋಗ ಅಗ್ಬಹ್ದು ಅನ್ನುವ ಅನಿಸಿಕೆ..
ಈಗ ಎಲ್ಲರ ಹತ್ರ ನು ಮೊಬೈಲ್ ಇರುತ್ತೆ. ಅದ್ರಲ್ಲಿ ಒಂದು ೬೦% ಜನ ಕಾಲರ್ ಟ್ಯೂನ್ ಹಾಕ್ಸಿರ್ತ್ತಾರೆ.. ಇದರ ಖರ್ಚು
ಎಷ್ಟು ಅಂತ ನೋಡೋಣ ಬನ್ನಿ..
ಮೊದಲ ಸಲ : ೩೦ ರೂಪಾಯಿಗಳು..
ಮೊದಲ ಹಾಡು: ೧೫ ರೂಪಾಯಿಗಳು..
ಒಂದು ತಿಂಗಳಿಗೆ: ೩೦ ರೂಪಾಯಿಗಳು..
ಒಂದು ವರ್ಷಕ್ಕೆ : ೩೦ X ೧೨ = ೩೬೦ ರೂಪಾಯಿಗಳು..
ವರ್ಷಕ್ಕೆ ೧೦ ಸಲವಾದ್ರೂ ಟ್ಯೂನ್ ಬದಲಾಯಿಸ್ತಿವಿ..ಅದರ ಖರ್ಚು: ೧೫೦ ರೂಪಾಯಿಗಳು..
ಒಟ್ಟು ಮೊತ್ತ : ೫೧೦ ರೂಪಾಯಿಗಳು ಒಂದು ವರ್ಷಕ್ಕೆ..
ನಿಮಗೆ ಇದು ಬರಿ ೫೦೦ ರುಪಾಯಿ ಅನಿಸಿದರೆ.. ಮತ್ತೊಮ್ಮೆ ಮೇಲೆ ಇರುವ ವೀಡಿಯೊ ನೋಡಿ..
ಬೇರೆ ಟೈಮ್ ಅಲ್ಲಿ ಅಲ್ಲದಿದ್ರೂ atleast recession ಟೈಮ್ ಅಲ್ಲಿ ೫೦೦ ರುಪಾಯಿ ಕೂಡ ದೊಡ್ಡ amount...
ಯೋಚನೆ ಮಾಡಿ..
P.S: ನಾನಂತೂ ನನ್ನ ಕಾಲರ್ ಟ್ಯೂನ್ ತಗಿಸ್ದೆ...