2.07.2009

ನಗರದಲ್ಲಿ ನಾಯಕರು............




ಇದು ಆಧರಣೀಯ ವಿಜಯಶಂಕರ್ ಜೀ.....ಅವರ ಚುಕುಬುಕು ರೈಲು ಪ್ರಯಾಣದ ಪುರಾಣ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣವೋ ಅಥವಾ ಬೆಂ-ಮೈ ಜೋಡಿ ಹಳಿ ಕಾಮಗಾರಿ ಶುರುಗೊಳ್ಳುತ್ತಿರುವ ಕಾರಣವೋ ಅಂತು ಪರಿಶೀಲನೆಗೆ ತೆರಳಿದ್ದರು.
ಈ ನಮ್ಮ ಪಯಣ ಆರಂಭದಲ್ಲೇ ಎಡವಟ್ಟಾಯಿತು. ಮುಂಜಾನೆ 9.15ಕ್ಕೆ ಪಿಕ್ಅಪ್ ಎಂದು ಸಂಸದ ಸಹಾಯಕ ತಿಳಿಸಿದ್ದರೂ ಅವರೇ ನಾಪತ್ತೆ. ಇದರಿಂದ ಕೆಂಡಾಮಂಡಲರಾದ ಸೀನಿಯರ್ ರೀಪೋರ್ಟರ್, ಟೈಮ್ಸ್ ಆಫ್ ಇಂಡಿಯಾದ ಮರ್ಮಮಕಲ್ ಸಂಸದರನ್ನು ತರಾಟೆ ತೆಗೆದುಕೊಂಡರು. ಗಂಟೆಗಳ ಕಾಲ ತಡವಾಗಿ ಬದ್ದದ್ದನ್ನು ಪ್ರಶ್ನಿಸಿದರು. ಇದರಿಂದ ಶಂಕರ್ ಜೀ ಮೂಡ್ ಔಟ್...
ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಕಾಲದ ಶಸ್ತ್ರಗಾರ ಸಂಗ್ರಹ ಕೋಣೆಗೆ ಪ್ರವೇಶ ಪಡೆದದ್ದೊಂದು ಸಾಧನೆಯೇ ಸರಿ. ಸುಮಾರು 7 ಅಡಿ ಆಳದಲ್ಲಿರುವ ಈ ಗುಂಬಸ್ ಮಾದರಿ ಕಟ್ಟಡ ಪ್ರವೇಶಿಸಿದವರಲ್ಲಿ ಮರ್ಮಕಲ್, ಕಸ್ತೂರಿ ಸುಧಿ, ಸುವರ್ಣ ನವೀನ ಹಾಗೂ ಕ್ರೊನಿಕಲ್ನ ಕೃಷ್ಣ ಮೊದಲಿಗರು. ಈ ಪೈಕಿ ಕೃಷ್ಣಗೆ ಮಾತ್ರ ತುಂಬಾ ನಿರಾಸೆ. ಕಾರಣ ಆತ ಎನಿಸಿದ್ದಂತೆ ಅಲ್ಲಿ ಏನು ನಡೆಯಲಿಲ್ಲ ಆದ್ದರಿಂದ. (ಹೆಚ್ಚಿನ ಮಾಹಿತಿಗೆ ಕ್ರೊನಿಕಲ್ ಕೃಷ್ಣನನ್ನು ಸಂಪಕರ್ಿಸಿ)
ನಮ್ಮ ಈ ಪಯಣದಲ್ಲಿ ಈ ಟಿವಿಯ ರಮೇಶ್ ಪೆರ್ಲ ಮಾಡಿದ ತರ್ಲೆ ಕೂಡ ತಮಾಷೆಯಾಗಿಯೇ ಇತ್ತು. ಸಂಸದರನ್ನು ಈತ ಗೋಳು ಹೂಯ್ದುಕೊಂಡ ಪರಿ ಕಂಡ ವ್ಯಾನ್ನಲ್ಲಿದ್ದ ಇತರ ಮಿತ್ರರು ಸಕತ್ ಮಜಾ ಅನುಭವಿಸಿದರು.
ಕಡೆಗೆ ಪಯಣದ ಅಂತ್ಯದಲ್ಲಿ ಸಂಸದರು, ವ್ಯಾನ್ ನಿಂದ ಇಳಿಯುವಾಗ `ನನ್ನ ಮೂಡ್ ಸರಿಯಾಗಲು ಗಂಟೆಗಳೇ ಬೇಕಾಯಿತು' ಎಂದು ಕಲಾವಿದನ ಶೈಲಿಯಲ್ಲಿ ಇನ್ನೊಂದು ನಮಸ್ಕಾರ ಮಾಡಿ ಇಳಿದ್ರು.
ಅರೇ ಈ ಪೋಟೋ ಬಗ್ಗೆ ಏನು ಹೇಳ್ಲೆ ಇಲ್ಲ ಅಂದ್ಕೋತ್ತಿದೀರಾ......ಜಸ್ಟ್ ಎ ಮಿನಿಟ್... ಇದು ನಾನು, ಸುದೇಶ, ರವೀಶ, ಮಹೇಶ, ಹಾಗೂ ಕಿಶೋರ ಒಟ್ಟಾಗಿ ಸೇರಿ ತೆಗೆಸಿಕೊಂಡ ಫೋಟೋ. ಹೇಳಿ ಹೇಗಿದೆ. ಒಂಥರಾ `ನಗರದಲ್ಲಿ ನಾಯಕರು' ಸಿನಿಮಾದ ಪೋಸ್ಟರ್ ಥರಾ ಇಲ್ವಾ...

3 comments:

  1. nagaradalli nayarakaru sinimada poster alla ........?

    ReplyDelete
  2. kastiriyalli aagaddu; Just kannadadalli aagide!
    Maheshanna, lekhanangalu heege muudi barali..

    ReplyDelete
  3. I just saw this while googling in Kannada.
    Good blog. thanks

    ReplyDelete