2.22.2009

ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕ್ಕೆ ಸಾಟಿ ಬೇರಿಲ್ಲ...............







ಹಾಯ್ ಫ್ರೆಂಡ್ಸ್.....
ನಾಡಿನಾದ್ಯಂತ ಈ ದಿನ ಶಿವನ ಭಕ್ತರು ಭಯಭಕ್ತಿಯಿಂದ ಶಿವನ ಆರಾಧನೆಯಲ್ಲಿ ತೊಡಗಿರುತ್ತಾರೆ. ಮೈಸೂರಿನ ನಂಜನಗೂಡು ದಕ್ಷಣಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ. ಇಂಥ ನಂಜುಂಡೇಶ್ವರನ ದರ್ಶನಕ್ಕೆ ಭಕ್ತರು ಮುಗಿಬೀಳುವುದು ಸಹಜ. ಆದರೆ ಎಲ್ಲರಿಗೂ ಈ ಭಾಗ್ಯ ಲಭಿಸದು. ಸೋ, `ಜಸ್ಟ್ಕನ್ನಡ' ಬ್ಲಾಗಿಸುವವರಿಗೆ ಹೆಲ್ಪ್ ಆಗಲಿ ಅನ್ನೋ ಕಾರಣಕ್ಕೆ ನಂಜುಂಡೇಶ್ವರನ ದರ್ಶನವನ್ನು ಇಂಟರ್ನೆಟ್ ಮೂಲಕವೇ ಮಾಡಿಸ್ ಬೇಕು ಅನ್ನೋದು ಉದ್ದೇಶ. ಈ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ. ಕ್ಯಾಮೆರಮನ್, ಗೆಳೆಯ ಜಯಂತ್ ನೀಡಿದ ಸಹಕಾರಕ್ಕೆ ಧನ್ಯವಾದ.
ಸ್ನೇಹಿತರಾದ ಜಯಂತ್, ಗುರು, ಹಾಗೂ ಈಶ್ವರ್ ಸಿಂಗ್ ಬೆಳಗ್ಗೆ 7 ಗಂಟೆಗೆ ಎದ್ದು ಬೈಕನ್ನೇರಿ ನಂಜನಗೂಡು ತಲುಪಿ ಶಿವನ ದರ್ಶನ ಮಾಡಿ ಬಂದಿದ್ದಾರೆ. ಜತೆಗೆ ಪ್ರಸಾದವನ್ನು ತಂದಿದ್ದರು. ಆ ಮೂಲಕ ಬ್ಲಾಗಿಸುವವರಿಗೂ ಶಿವನ ದರ್ಶನ ಭಾಗ್ಯ ನೀಡಿದ್ದಾರೆ. ಸೇ ಥ್ಯಾಕ್ಸ್ ಟು ದಿಮ್.
ಇದೇ ರೀತಿ ಮೈಸೂರಿನ ಅರಮನೆ ಆವರಣದ ಶಿವನ ದೇವಾಲಯದಲ್ಲೂ ಚಿನ್ನದ ಕೊಳಗ ಧರಿಸಿದ ಲಿಂಗ, ಅಗ್ರಹಾರದ ದೇವಾಲಯದಲ್ಲಿನ 101 ಶಿವನ ಲಿಂಗವನ್ನು ಸಹ ಬ್ಲಾಗಿಸುವವರ ದರ್ಶನಕ್ಕೆ ನೀಡಲಾಗಿದೆ.

0 comments:

Post a Comment