2.03.2009

ಒಂದು ಗೊರಿಲ್ಲ ಕಥೆ


ಪೋಲೋ...ದ ಗೋರಿಲ್ಲ...............


ಕಳೆದ ವಾರದ ಪತ್ರಿಕೆಗಳಲ್ಲಿ ಲಿಂಗ ಬದಲಾವಣೆಯದ್ದೆ ಸುದ್ಧಿ. ಮೈಸೂರು ತಾಲೂಕಿನ ಜಯಪುರ ಹೋಬಳಿಯ ಯುವಕನೊಬ್ಬ ಬಲವಂತವಾಗಿ ಯುವತಿಯಾದ ಪ್ರಕರಣ ಒಂದೆಡೆಯಾದರೆ, ಬೆಂಗಳೂರಿನ ಯುವಕನೊಬ್ಬ ಸಹ ಇದೇ ರೀತಿ ಹಿಜಡಾಗಳ ಬಲವಂತಕ್ಕೆ ಸಿಲುಕು ಪುರುಷತ್ವ ಕಳೆದುಕೊಂಡ ದುರಂತ ಕಥೆ ಮತ್ತೊಂದು ಕಡೆ.
ಈ ಎರಡು ಘಟನೆಗಳು ದಿನಪತ್ರಿಕಗಳಲ್ಲಿ ಹಾಗೂ ಎಲೆಕ್ಟ್ರಾನಿಕ್ ಮೀಡಿಯಗಳಲ್ಲಿ ಬಾರಿ ಪ್ರಚಾರ ಪಡೆದುಕೊಂಡವು. ಆದರೆ ಇಂಥದ್ದೆ ಘಟನೆ ತುಸು ಭಿನ್ನವಾಗಿರುವ ಮತ್ತೊಂದು ಪ್ರಕರಣ ಮೈಸೂರು ಮೃಗಾಲಯದಲ್ಲಿ ಬೆಳಕಿಗೆ ಬಂದಿದೆ. ಆದರೆ ಇಲ್ಲಿ ಪುರುಷತ್ವ ಕಳೆದುಕೊಂಡಿರುವುದು ಮನುಷ್ಯನಲ್ಲ, ಬದಲಿಗೆ ಮನುಷ್ಯನ ಪೂರ್ವಜನೆಂದೇ ಜೀವ ವಿಜ್ಞಾನಿಗಳು ಪ್ರತಿಪಾದಿಸುವ ಗೋರಿಲ್ಲ ಎಂಬುದು ವಿಶೇಷ ಸಂಗತಿ.

ಜೀವವಿಜ್ಞಾನಿಗಳ ಪ್ರಕಾರ ಗೋರಿಲ್ಲ ಮಾನವನ ಪೂರ್ವಜ. ಜೀವವಿಕಾಸದ ನಂತರ ಇವೇ ಮಾನವನಾಗಿ ಪರಿವರ್ತನೆಗೊಂಡವು ಎಂಬುದು ಒಂದು ವಾದ. ಇಂದು ಈ ಸಂತತಿ ಅಳಿವಿನಲ್ಲಿದೆ. ಇಡೀ ಏಷ್ಯಖಂಡದಲ್ಲೇ ಮೈಸೂರು ಮೃಗಾಯಲದಲ್ಲಿ ಮಾತ್ರ ಗೋರಿಲ್ಲ ಉಳಿದಿರುವುದು. ಆದರೆ ಇದು ಸಹ ಕಳೆದ ಎಂಟು ವರ್ಷಗಳಿಂದ ಏಕಾಂಗಿ. ಸಂಗಾತಿ ಸಿಕ್ಕರು ಸಂತಾನೋತ್ಪತ್ತಿ ಮಾಡುವ ಸಾಮಥ್ರ್ಯ ಕಳೆದುಕೊಂಡಿರುವ ನತದೃಷ್ಠ ವಾನರ. ಇದಕ್ಕೆ ಕಾರಣ ಮಾನವನ ಅತಿಯಾದ ಬುದ್ಧಿವಂತಿಕೆ ಹಾಗೂ ಸ್ವಾರ್ಥ.

ಮೈಸೂರು ಚಾಮರಾಜ ಮೃಗಾಲಯದ ಆಕರ್ಷಣೆಗಳ ಪೈಕಿ ಇಲ್ಲಿನ ಗೋರಿಲ್ಲ ಮನೆಯಲ್ಲಿ ವಾಸಿಸುತ್ತಿರುವ ಧೈತ್ಯ ಜೀವಿ `ಪೋಲೋ' ಪ್ರಮುಖವಾದದ್ದು. ಐರ್ಲೆಂಡ್ ದೇಶದ ಡಬ್ಲಿನ್ ಮೃಗಾಲಯದಿಂದ ಇದನ್ನು 1995ರಲ್ಲಿ ಮೈಸೂರಿಗೆ ಕರೆತರಲಾಗಿದೆ. 35 ವರ್ಷ ವಯಸ್ಸಿನ ಈ ಗೋರಿಲ್ಲ `ಗಿಫ್ಟ್'ರೂಪದಲ್ಲಿ ಮೈಸೂರಿನ ಮೃಗಾಲಯಕ್ಕೆ ನೀಡಲಾಗಿತ್ತು. ಆದರೆ ಹೀಗೆ ಕೊಡುಗೆ ನೀಡುವಾಗಲೇ ಈ ಗೋರಿಲ್ಲದ ಜನನಾಂಗ ನಿಷ್ಕ್ರೀಯಗೊಳಿಸುವ ಸಲುವಾಗಿ ದೇಹದಿಂದ ಬೇರ್ಪಡಿಸಿರುವ ಬಗ್ಗೆ ಶಂಕೆ ಮೂಡಿದೆ. ಐರ್ಲೆಂಡ್ನ ಈ ದೈತ್ಯಜೀವಿ ಮೈಸೂರು ಮೃಗಾಲಯಕ್ಕೆ ಬಂದ ಮೇಲೆ ತನ್ನ ಸಂತತಿ ಅಭಿವೃದ್ಧಿಪಡಿಸುವಲ್ಲಿ ವಿಫಲಗೊಂಡಿರುವುದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ.

ಪೋಲೋ ಮೈಸೂರು ಮೃಗಾಲಯಕ್ಕೆ ಆಗಮಿಸುವ ಮುನ್ನ ಇಲ್ಲಿ ಸುಗ್ರೀವಾ ಮತ್ತು ಸುಮತಿ ಜೋಡಿ ಇತ್ತು. ಆದರೆ ಸುಗ್ರೀವಾ ನಿಧನದ ಬಳಿಕ ಸುಮತಿ ಏಕಾಂಗಿ. ಈ ಕಾರಣಕ್ಕಾಗಿಯೇ ಪೋಲೋ ಮೈಸೂರು ಮೃಗಾಲಯಕ್ಕೆ ಗಿಫ್ಟ್ ರೂಪದಲ್ಲಿ ಲಭಿಸಿದಾಗ ಮೃಗಾಲಯ ಸಿಬ್ಬಂದಿ ಸಂತಸಗೊಂಡಿದ್ದರು. ಕಾರಣ ಹೊಸ ಜೋಡಿಯಿಂದ ಸಂತಾನ ನಿರೀಕ್ಷಿಸಿದ್ದರು. ಆದರೆ 1995ರಿಂದ 2000ದ ವರೆಗೂ ಪೋಲೋ-ಸುಮತಿ ಜತೆಜತೆಯಲ್ಲೇ ಕಾಲ ಕಳೆದರೂ ಏನು ಪ್ರಯೋಜನವಾಗಲಿಲ್ಲ. ಸುಮತಿ ಗರ್ಭದರಿಸಲೇ ಇಲ್ಲ. ಕಡೆಗೆ 2000ನೇ ಇಸವಿಯಲ್ಲಿ ಸುಮತಿ ಹೃದಯಘಾತದಿಂದ ನಿಧನ ಹೊಂದಿದಳು. ಅಲ್ಲಿಗೆ ಗೋರಿಲ್ಲ ಸಂತತಿ ಅಭಿವೃದ್ಧಿಪಡಿಸುವ ಮೃಗಾಲಯದ ಅಧಿಕಾರಿಗಳ ಆಸೆ ಕಮರಿ ಹೋಯಿತು.

ಪೋಲೋ ಸ್ಪೆಷಲ್ :
ಪೋಲೋ ಬೆನ್ನಿನ ಭಾಗದ ಸಿಲ್ವರ್ ಬಣ್ಣದಲ್ಲಿದೆ. ಈ ಕಾರಣಕ್ಕಾಗಿಯೇ ಇಂಥ ಗೋರಿಲ್ಲಗಳನ್ನು `ಸಿಲ್ವರ್ ಬ್ಯಾಕ್' ಗೋರಿಲ್ಲ ಎಂದು ಕರೆಯಲಾಗುತ್ತದೆ.
ಕಾಡಿನಲ್ಲಿ ವಾಸಿಸು ಗೋರಿಲ್ಲ ಸಂಘಜೀವಿ. ಆದ್ದರಿಂದಲೇ ಇವು ಗುಂಪು ಗುಂಪಾಗಿ ಜೀವಿಸುತ್ತದೆ. ಅಂಥ ಸಮಯದಲ್ಲೆಲ್ಲ ಇಂಥ `ಸಿಲ್ವರ್ ಬ್ಯಾಕ್' ಹೊಂದಿರುವ ಗೋರಿಲ್ಲವೇ ತಂಡದ ಕ್ಯಾಪ್ಟನ್ಶಿಪ್ ವಹಿಸುವುದು. ಇಂಥ `ಕ್ಯಾಪ್ಟನ್'ಜಾತಿಗೆ ಸೇರಿದ್ದೇ ಈ ಪೋಲೋ.

1972ರಲ್ಲಿ ಪೋಲೋ ಜನಿಸಿರುವ ಬಗ್ಗೆ ದಾಖಲೆಗಳಿವೆ. ಕಾಡಿನ ಈ ಜೀವಿಯನ್ನು ಸಂರಕ್ಷಣೆ ಮಾಡಿ ಐರ್ಲೆಂಡ್ನ ಮೃಗಾಲಯದಕ್ಕೆ ಕರೆ ತಂದ ಬಳಿಕ ಪೋಲೋ ಅನೇಕ ಮರಿಗಳ ಜನನಕ್ಕೆ ಕಾರಣವಾಗಿದೆ. ಆ ಮೂಲಕ ಅಲ್ಲಿ ಗೋರಿಲ್ಲ ಸಂತತಿಯನ್ನು ಅಭಿವೃದ್ಧಿಪಡಿಸಿದ ಕೀತರ್ಿ ಪೋಲೋಗೆ ಸಲ್ಲುತ್ತದೆ.( ಈ ಬಗ್ಗೆ ಮೈಸೂರು ಮೃಗಾಲಯ ಹೊರ ತಂದಿರುವ ಕೈಪಿಡಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಪೋಲೋ ಸಂತಾನ ಪ್ರಾಪ್ತಿಯಲ್ಲಿ ಸಮರ್ಥ ಎಂಬುದಕ್ಕೆ ಇದು ದಾಖಲೆ ಎನ್ನಲು ಅಡ್ಡಿ ಇಲ್ಲ.)
ಅಂದಾಜು 175ರಿಂದ 180 ಕೇ.ಜಿ ತೂಕವಿರುವ ಈ ದೈತ್ಯ ಪ್ರಾಣಿ ಈಗ ಏಷ್ಯಾದಲ್ಲಿ ಜೀವಂತವಾಗಿರುವ ಏಕೈಕ ಗೋರಿಲ್ಲ. ಈ ಕಾರಣಕ್ಕಾಗಿಯೇ ಪೋಲೋಗೆ ಮೈಸೂರು ಮೃಗಾಲಯದಲ್ಲಿ ವಿಶೇಷ ಆರೈಕೆ. ಪ್ರತಿ ನಿತ್ಯ ವಿವಿಧ ಬಗೆಯ ಹಣ್ಣು, ಸೊಪ್ಪು, ತರಕಾರಿಗಳನ್ನು ಪೋಲೋಗೆ ನಿಗಧಿತ ಸಮಯಕ್ಕೆ ಸರಿಯಾಗಿ ನೀಡಲಾಗುತ್ತದೆ. ಜತೆಗೆ ಪ್ರತಿನಿತ್ಯ ಸಂಜೆ ಕುಡಿಯಲು ಚಹಾ ಸಹ ಪೂರೈಸಲಾಗುತ್ತದೆ. ಒಟ್ಟಾರೆ ಮೈಸೂರು ಮೃಗಾಲಯದವರು ಅಳಿವಿನಂಚಿನಲ್ಲಿರುವ ಈ ಅಪರೂಪದ ಅತಿಥಿ ಆಯಸ್ಸನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಮೀರಿ ಶ್ರಮಿಸುತ್ತಿದ್ದಾರೆ.

ಇಷ್ಟೆಲ್ಲಾ ವಿಶೇಷತೆ, ಅಚ್ಚರಿಗೆ ಮೂಲವಾದ ಈ ದೈತ್ಯ ಜೀವಿಗೆ ಈಗ ಸಂತಾನ ಅಭಿವೃದ್ಧಿಪಡಿಸಿಕೊಳ್ಳುವ ಸಾಮಥ್ರ್ಯವಿಲ್ಲ ಎಂಬುದು ವಿಷಾಧದ ಸಂಗತಿ. ಸಾಮಾನ್ಯವಾಗಿ ವಿದೇಶಗಳಿಂದ ಪ್ರಾಣಿಗಳನ್ನು ಕೊಡುಗೆ ರೂಪದಲ್ಲಿ ಪಡೆಯುವಾಗ ಆ ಪ್ರಾಣಿಗಳ ಸಂತಾನ ಸಾಮಥ್ರ್ಯ ನಿಷ್ಕ್ರೀಯಗೊಳಿಸಲಾಗುತ್ತದೆ. ಕಾರಣ ಅಪರೂಪದ ತಳಿ ಹೊರ ದೇಶದಲ್ಲಿ ಅಭಿವೃದ್ಧಿ ಹೊಂದುವುದನ್ನು ನಿಯಂತ್ರಿಸಲು . ಮನುಷ್ಯನ ಈ ಸ್ವಾರ್ಥ ಬುದ್ಧಿಯ ಪರಿಣಾಮ ಈಗ ಗೋರಿಲ್ಲ ಸಂತತಿ ಪ್ರಪಂಚದಲ್ಲಿ ಅಳಿವಿನಂಚಿಗೆ ಬಂದಿದೆ. ಕೇವಲ ಮೃಗಾಲಯಗಳಲ್ಲಿ ಮಾತ್ರ ನೋಡುವ ವಾತಾವರಣ ನಿಮರ್ಾಣಗೊಂಡಿದೆ. ಅದರಲ್ಲೂ ಏಷ್ಯಾ ಖಂಡದಲ್ಲಿ ಇಂಥ ಅಪರೂಪದ ಪ್ರಾಣಿ ಮೈಸೂರು ಮೃಗಾಲಯದಲ್ಲಿ ಮಾತ್ರ ಹಾಲಿ ಜೀವಂತವಾಗಿರುವುದು.

ಮೈಸೂರು ಮೃಗಾಲಯದಲ್ಲಿ ಕಳೆದ 15 ವರ್ಷಗಳಿಂದ ಪೋಲೋಗೆ ಆಸರೆ ನೀಡಲಾಗಿದೆ. ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಗೋರಿಲ್ಲಾ ಕೀಪರ್ ಶಂಕರ್, ಕಳೆದ ಎಂಟು ವರ್ಷಗಳಿಂದ ಪೋಲೋನ ಆತ್ಮೀಯ ಸ್ನೇಹಿತ. ತನ್ನ ಎಲ್ಲಾ ಕಮಾಂಡ್ಗಳನ್ನು ಪಾಲಿಸುವ ಧೈತ್ಯ ವಾನರ ಪೋಲೋ
ಕಂಡರೇ ಶಂಕರ್ಗೂ ಅಷ್ಟೆ ಅಚ್ಚುಮೆಚ್ಚು. ಇವರ ಕಾರ್ಯ ಶ್ಲಾಘಿಸಿ ಅಮೇರಿಕಾದ ಸ್ವಯಂ ಸೇವಾ ಸಂಸ್ಥೆ `ಬೆಸ್ಟ್ ಗೋರಿಲ್ಲ ಕೀಪರ್' ಪ್ರಶಸ್ತಿ ಜತೆಗೆ ನಗದು ಬಹುಮಾನವನ್ನು ನೀಡಿ ಸನ್ಮಾನಿಸಿದೆ.

ಅಳಿವಿನಂಚಿನಲ್ಲಿರುವ ಈ ಪ್ರಾಣಿಗೆ ಈಗ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ವಿಶೇಷ ಕಾಳಜಿವಹಿಸಲಾಗುತ್ತಿದೆ. ಇದಕ್ಕಾಗಿಯೇ ಪ್ರತ್ಯೇಕ ಎನ್ಲ್ಕೋಷರ್ ನಿಮರ್ಿಸಲಾಗಿದ್ದು ಪ್ರತಿ ನಿತ್ಯ ಪೋಲೋವನ್ನು ಇಲ್ಲಿ ಬಿಡಲಾಗುತ್ತದೆ. ಈ ಸಂದರ್ಭದಲ್ಲೇ ಪೋಲೋ ಸಾರ್ವಜನಿಕರನ್ನು ಆಕಷರ್ಿಸುವುದು. ತನ್ನ ವಿಶಿಷ್ಠ ಭಾವಭಂಗಿಳಿಂದ ನೋಡುಗರ ಮನ ಸೆಳೆಯುತ್ತದೆ. ಪೋಲೋ ಸಂತಸಗೊಂಡಾಗ ಎದೆಯನ್ನು ಎರಡು ಕೈಗಳಿಂದ ಬಡಿದುಕೊಂಡು ತನ್ನ ಹರ್ಷ ಅಭಿವ್ಯಕ್ತ ಪಡಿಸುವ ಪರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
---------------------------------
ಚಿಂಪಾಂಜಿಯದ್ದೂ ಚಿಂತೆ....?

ಮಕ್ಕಳಿಗೆ ಶಾಲಾ ಹಂತದಲ್ಲಿ ಲೈಂಗಿಕ ಶಿಕ್ಷಣ ಅವಶ್ಯಕತೆಯೇ ಅಥವಾ ಅನಾವಶ್ಯಕತೆಯೇ ಎಂಬ ಚಚರ್ೆ ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿದೆ. ಆದರೆ ಇದಕ್ಕೆ ಪೂರಕವಾದ ಒಂದು ಸಮಸ್ಯೆ ಮೈಸೂರು ಮೃಗಾಲಯದಲ್ಲಿ ಎದುರಾಗಿದೆ. ಇಲ್ಲಿ ಗಂಡು-ಹೆಣ್ಣು ಎರಡು ಗುಂಪಿಗೆ ಸೇರಿದ ಚಿಂಪಾಂಜಿಗಳಿದ್ದರೂ ಸಂತಾನ ಮಾತ್ರ ಬೆಳೆಯುತ್ತಿಲ್ಲ. ಇದೇ ಮೃಗಾಲಯದ ಆಡಳಿತವರ್ಗದವರ ತಲೆನೋವಾಗಿರುವುದು. ಇದಕ್ಕೆ ಕಂಡುಕೊಂಡ ಉಪಾಯ ಚಿಂಪಾಂಜಿಗೆ ಲೈಗಿಂಕ ಶಿಕ್ಷಣ ಕೊಡಿಸುವುದು. ಆದರೆ ಫಲ ಮಾತ್ರ ಶೂನ್ಯ.

ಮೈಸೂರು ಮೃಗಾಲಯದಲ್ಲಿ ವಾಸಿಸುತ್ತಿರುವ ಚಿಂಪಾಂಜಿಗಳದ್ದೊಂದು ವಿಚಿತ್ರ ಸಮಸ್ಯೆ. ಈ ಚಿಂಪಾಂಜಿಗಳು ಸಣ್ಣ ಮರಿಗಳಾಗಿರುವಾಗಲೇ ಇಲ್ಲಿಗೆ ಕರೆತರಲಾಗಿತ್ತು. ಪರಿಣಾಮ ಇವಕ್ಕೆ ಪ್ರಾಯದ ಪ್ರಾಣಿಗಳ ಸರಸ ಸಲ್ಲಾಪದ ಬಗೆಗೆ ಅರಿವೇ ಇಲ್ಲ. ಇದು ಚಿಂಪಾಂಜಿ ಸಂತತಿ ಮೇಲೆ ಈಗ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಪ್ರಸ್ತುತ ಮೃಗಾಲಯದಲ್ಲಿ 5 ಚಿಂಪಾಂಜಿಗಳಿವೆ. ಈ ಪೈಕಿ 59ವರ್ಷ ದಾಟಿರುವ ವಾಲಿಯೇ ಸಿನಿಯರ್ ಮೋಸ್ಟ್. ಜತೆಗೆ ಪಕ್ಕಾ ಲೋಕಲ್. ಅಂದ್ರೆ ಇದೇ ಮೃಗಾಲಯದಲ್ಲಿ ಹುಟ್ಟಿದ್ದು. ಇದರ ಜತೆಗೆ ಮೈಸನ್ - ಗುರು ಹಾಗೂ ಮಿರಿಲ್ಲಾ- ಗಂಗಾ ಅನ್ನುವ ಚಿಂಪಾಂಜಿಗಳು ಸಹ ಇವೆ. ಗಂಡು-ಹೆಣ್ಣು ಚಿಂಪಾಂಜಿಗಳು ಒಟ್ಟಾಗಿಯೇ ಇದ್ದರು ಸಂತತಿ ಮಾತ್ರ ಬೆಳೆಯುತ್ತಿಲ್ಲ. ಕಾರಣ ಈ ಚಿಂಪಾಂಜಿಗಳಿಗೆ ಲೈಗಿಂಕ ಜ್ಞಾನದ ಬಗ್ಗೆ ಅರಿವಿಲ್ಲದಿರುವುದು.

ಈ ಹಿನ್ನೆಲೆಯಲ್ಲಿ ಮೃಗಾಲಯದವರು ಚಿಂಪಾಂಜಿಗಳಿಗೆ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅನೇಕ ಸರ್ಕಸ್ಸ್ಗಳನ್ನು ಮಾಡಿದರು. ಕಡಗೆ ಇವುಗಳಿಗೆ `ನೀಲಿ ಚಿತ್ರ'ಗಳನ್ನು ಸಹ ಪ್ರದಶರ್ಿಸಿ ಲೈಂಗಿಕ ಜ್ಞಾನ ಮೂಡಿಸಲು ಪ್ರಯತ್ನಿಸಲಾಯಿತು. ಆದರೂ ನೋ ಇಂಪ್ರೂಮೆಂಟ್ಸ್...ಸಂತತಿ ಮಾತ್ರ ಬೆಳೆಯುತ್ತಲೇ ಇಲ್ಲ.
--------------------------

================================

No comments:

Post a Comment