3.20.2009

ಡೊಂಟ್ ಕೇರ್ ಫಾರ್ ಸಮ್ಮರ್....


ಈಗ ಎಲ್ಲೆಲ್ಲೂ ಬೇಸಿಗೆಯದ್ದೇ ಕಾಟ. ಆದರೆ ಮೈಸೂರಿನ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಮಾತ್ರ ಈ ತಾಪ ತಟ್ಟಿಲ್ಲ. ಸಮ್ಮರ್ನಲ್ಲೂ ಇಲ್ಲಿನ ಪ್ರಾಣಿಗಳು ಸಖತ್ ಆಹ್ಲಾದಕರವಾಗಿವೆ. ಆ ಮೂಲಕ ಸಂಗ್ರಹಾಲಯದ ಆಥರ್ಿಕ ಸಂಗ್ರಹವನ್ನು ಹೆಚ್ಚಳಗೊಳಿಸಿದೆ.
ಮೈಸೂರು ನಗರದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಶ್ರೀ ಚಾಮರಾಜೇಂದ್ರ ಮೃಗಾಲಯವೂ ಒಂದು. ದಶಕಗಳ ಹಿಂದೆ ಮೈಸೂರಿನ ಅರಸರು ಪ್ರಾರಂಭಿಸಿದ ಈ ಪ್ರಾಣಿ ಸಂಗ್ರಹಾಲಯ ಇಂದು ರಾಜ್ಯ, ದೇಶಗಳ ಗಡಿ ದಾಟಿ ಹೆಸರುಗಳಿಸಿದೆ. ಅದೇ ರೀತಿ ಕೋಟ್ಯಾಂತರ ರೂ.ಗಳ ವಹಿವಾಟು ನಡೆಸಲು ಈ ಪ್ರಾಣಿಗಳು ಪರೋಕ್ಷವಾಗಿ ಸಹಕಾರಿಸಿವೆ . ಈ ಸತ್ಯ ಅರಿತಿರುವ ಇಲ್ಲಿನ ಆಡಳಿತ ವರ್ಗ, ಪ್ರಾಣಿ ಪಕ್ಷಿಗಳ ಸೇವೆಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ.
ಬೇಸಿಗೆಯ ಈ ಸುಡು ಬಿಸಿಲಿನ ಬೇಗೆಯಿಂದ ವನ್ಯಜೀವಿಗಳಿಗೆ ಯಾವುದೇ ಅಡ್ಡ ಪರಿಣಾಮ ಉಂಟಾಗದಿರಲಿ ಎಂಬ ಕಾರಣಕ್ಕೆ ನೀರು ಹನಿಗಳ ಸ್ಪ್ರಿಂಕ್ಲರ್ಗಳನ್ನು ಅಳವಡಿಸಿದ್ದಾರೆ. ಇದರಿಂದಾಗಿ ಇಲ್ಲಿನ ಜಿರಾಫೆ, ಕಾಡೆಮ್ಮೆ, ಕರಡಿ ಮುಂತಾದ ಪ್ರಾಣಿಗಳು ಆಹ್ಲಾದಕರವಾಗಿ ನೀರಾಟವಾಡುತ್ತ ಬೇಸಿಗೆ ದಗೆಯನ್ನು ಮರೆಯುತ್ತಿವೆ.
ಸ್ಪ್ರಿಂಕ್ಲರ್ಗಳ ಮೂಲಕ ನೀರ ಹನಿಗಳು ಮಳೆ ರೂಪದಲ್ಲಿ ಸುರಿಯುತ್ತಿರುವ ಕಾರಣ ಈ ಪ್ರದೇಶವೆಲ್ಲ ಬೇಸಿಗೆಯಲ್ಲೂ ಹಸಿರಿನಿಂದ ಕೂಡಿದೆ. ಪರಿಣಾಮ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳಿಗೆ ಬೇಸಿಗೆಯ ಝಳ ತಟ್ಟುತ್ತಿಲ್ಲ. ಇದೇ ರೀತಿ ಇಲ್ಲಿನ ಮತ್ತೊಂದು ಆಕರ್ಷಣೆ ಸ್ಥಳವಾದ ಆನೆ ಮನೆಯಲ್ಲೂ ಗಜರಾಜನಿಗೆ ನಿತ್ಯ ಜಳಕ ತಪ್ಪಿದ್ದಲ್ಲ. ಆವರಣದ ಮಧ್ಯದಲ್ಲಿರುವ ಬೃಹತ್ ತೊಟ್ಟಿಯಲ್ಲಿ ಆನೆಗಳು ಗುಂಪುಗುಂಪಾಗಿ ಬಂದು ಸಾಮೂಹಿಕ ಸ್ಥಾನಕ್ಕೆ ಅಣಿಯಾಗುವ ದೃಶ್ಯ ಆಕರ್ಷಣೀಯವಾಗಿದೆ. ಇಲ್ಲಿನ ಪ್ರಾಣಿ ಪಕ್ಷಿಗಳ ಇಂಥ ಆಕರ್ಷಣೆಯೇ ಸಂಗ್ರಹಾಲಯದ ಆಧಾಯ ಹೆಚ್ಚಳಕ್ಕೆ ಮೂಲ.



ಮೃಗಾಲಯದ ಪ್ರವೇಶ ದ್ವಾರದಿಂದ ಕಳೆದ ವರ್ಷ ಒಟ್ಟು 4.59 ಕೋಟಿ ರೂ. ಹಣ ಸಂಗ್ರಹಿಸಲಾಗಿತ್ತು. ಜತೆಗೆ ಪ್ರಾಣಿ ದತ್ತು ಯೋಜನೆಯಡಿ ಸಹ ಕೆಲ ಲಕ್ಷ ರೂ.ಗಳು ಸಂಗ್ರಹಗೊಂಡಿದ್ದವು . ಆದರೆ ಈ ವರ್ಷ ಮಾಚರ್್ ಅಂತ್ಯಗೊಳ್ಳುವ ಮೊದಲೇ ಪ್ರವೇಶ ದ್ವಾರದ ಮೂಲಕ 4.89 ಕೋಟಿ ರೂ. ಹಣ ಸಂಗ್ರಹಿಸಲಾಗಿದೆ. ಜತೆಗೆ ದತ್ತು ಸ್ವೀಕಾರ ಯೋಜನೆಯಡಿ ಅಂದಾಜು 30 ಲಕ್ಷ ರೂ. ಕ್ರೂಡಿಕರಿಸಲಾಗಿದೆ. ಈ ಎಲ್ಲಾ ಅಂಶಗಳ ಆಧಾರದ ಮೇಲೆ ಈ ವರ್ಷದ ಹಣ ಸಂಗ್ರಹ ದಾಖಲೆ ಪ್ರಮಾಣದ್ದಾಗಲಿದೆ ಎಂಬುದು ಕಾರ್ಯನಿವರ್ಾಹಕ ನಿದರ್ೇಶಕ ವಿಜಯರಂಜನ್ ಸಿಂಗ್ ಅವರ ಅಭಿಲಾಷೆ. ಸೆ ಗುಡ್ ಲಕ್ ಟು ಹಿಮ್...
---------------------------

1 comment:

  1. ಸರ್ ನನ್ನ ಅಭಿಪ್ರಾಯ ಹೇಳ್ತ್ತಿದ್ದೇನೆ ಅಸ್ಟೆ....... ನಿಮ್ಮ ಬ್ಲಾಗ್ನ ಬರಹಗಳಿಗೆ ಸಾಹಿತ್ಹತ್ಮಕವಾದ ಸ್ಪರ್ಶ ನೀಡಿ ಅದು
    ಓದುಗರಿಗೆ ಆಪ್ತಥೆಯನು,ಸಂವೆದಿಯನು ಹೆಚ್ಚಿಸಿ ತಮ್ಮ ತಾಣವನ್ನು ಅದರಲಿ ಹುಡುಕುವಂತಾಗುವುದು....

    ReplyDelete