3.13.2009

* ಡೇರಾ ಸಂಘಟನೆಯ ಡೇರ್ನೆಸ್.....



ಪಂಜಾಬ್ ಮೂಲದ ದೇರಾ ಸಚ್ಚಾ ಸೌಧ ಸಂಘಟನೆ ಕೆಲ ತಿಂಗಳುಗಳಿಂದ ಸುದ್ದಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣ ಸಂಘಟನೆ ಮುಖಂಡ ಗುರುಜೀ ರಾಮ್ ರಹೀಂ ಸಿಂಗ್
ಅವರ
ಮೇಲೆ ನಡೆಸಿದ ಕೊಲೆ ಯತ್ನ. ಸಿಖ್ ಧಮರ್ಿಯರಲ್ಲೇ ಒಂದು ಪಂಗಡ ಈ ಸಂಘಟನೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ. ಈ ಕಾರಣಕ್ಕಾಗಿಯೇ ಕೊಲೆ
ಯತ್ನ ನಡೆಸಲಾಗಿತ್ತು. ಆ ವೇಳೆಯಲ್ಲೇ ರಾಮ್ ರಹೀಂ ಸಿಂಗ್, ವಾಸ್ತವ್ಯಕ್ಕಾಗಿ ಆರಿಸಿಕೊಂಡಿದ್ದು ಮೈಸೂರು ತಾಲೂಕಿನ ನಾಗನಹಳ್ಳಿ ಸಮೀಪದ ಆಶ್ರಮವನ್ನು.
ಈಗ ಮತ್ತೆ ಈ ಆಶ್ರಮ ಸುದ್ದಿಯಲ್ಲಿದೆ. ಕಾರಣ ತಾತ್ಕಾಲಿಕ ವಾಸ್ತವ್ಯಕ್ಕಾಗಿ ರಾಮ್ ರಹೀಂ ಸಿಂಗ್ ಆಗಮಿಸಿರುವುದು.

ಕಳೆದ ಎರಡು ದಿನಗಳಿಂದ ಮೈಸೂರಿನಲ್ಲಿ ಸತ್ಸಂಗ ನಡೆಸಿಕೊಡುತ್ತಿದ್ದಾರೆ. ಜತೆಗೆ ಮೆಥೆಡ್ ಆಫ್ ಮೆಡಿಟೇಷನ್
ಕಲಿಸುವ ಮೂಲಕ ಯೋಗದ ಮಹತ್ವ ತಿಳಿಸುತ್ತಿದ್ದಾರೆ. ಈ ರೀತಿ ಯೋಗ ಕಲಿತು ಅದರಿಂದ ಪ್ರಯೋಜನ ಪಡೆದ
ಅನೇಕರು ಅವರ ಅನುಯಾಯಿಗಳಾಗಿದ್ದಾರೆ.
ಈ ಪೈಕಿ ರಾಜಸ್ತಾನ ಮೂಲದ ಇಂಗ್ಲಿಷ್ ಪ್ರಾಧ್ಯಾಪಕಿ ಮಿಸ್ ಪೂನಂ ಒಬ್ಬರು. ಈ ಕಾರಣಕ್ಕಾಗಿಯೇ ಆಕೆ ಈಗ ಗುರುಜೀ
ಅನುಯಾಯಿಯಾಗಿದ್ದು ಸ್ವಯಂ ಕಾರ್ಯಕತರ್ೆಯಾಗಿ ಮೈಸೂರಿನ ಆಶ್ರಮದಲ್ಲಿ ಸೇವೆ ಮಾಡುತ್ತಿದ್ದಾರೆ. ಇದೇ ರೀತಿ
ಅನೇಕ ಮಹಿಳೆಯರು ಸುಡು ಬಿಸಿಲನ್ನು ಲೆಕ್ಕಿಸದೆ ಟೊಂಕಕಟ್ಟಿ ಕಟ್ಟಡ ನಿಮಾ ಕಾರ್ಯದಲ್ಲಿ ನಿರತರಾಗಿದದ್ದು ಆಶ್ಚರ್ಯದ ಸಂಗತಿ.
ಮತ್ತೊಂದು ವಿಶೇಷ ಎಂದರೆ ಜಗತ್ತಿನಲ್ಲೇ ಅತ್ಯಂತ ಕಿರಿಯದಾದ ಸಂಚಾರಿ ಶಸ್ತ್ರಚಿಕಿತ್ಸಾ ಘಟಕ ಒಂದನ್ನು ಸಂಘಟನೆ ಹೊಂದಿರುವುದು .
ಪ್ರಪಂಚದಲ್ಲೇ
ಪ್ರಥಮ ಎನ್ನ ಬಹುದಾದ ಅತ್ಯಂತ ಕಿರಿಯದಾದ ಸಂಚಾರಿ ಶಸ್ತ್ರಚಿಕಿತ್ಸಾ ಘಟಕ ಇದು. ನೋಡಲು ಸಾಧಾರಣ ಜೀಪ್ನಂತೆ ಕಾಣುವ ಈ ವಾಹನದಲ್ಲಿ ಎಲ್ಲರೀತಿಯ ಅಪರೇಷನ್ ಮಾಡಬಹುದು. ಅಷ್ಟೊಂದು ಅತ್ಯಾಧುನಿಕ ಸವಲತ್ತುಗಳನ್ನು ಒದಗಿಸಲಾಗಿದೆ. ಈ ಕಾರಣದಿಂದಲೇ ಲಿಂಮ್ಕಾ ಬುಕ್ ಆಫ್ ರೆಕಾದ್ಸರ್ನಲ್ಲಿ ಸಹ ಇದು ಹೆಸರು ದಾಖಲಿಸಿದೆ.


ಈ ಆಶ್ರಮಕ್ಕೆ ಭೇಟಿ ನೀಡಿದಾಗ ನನಗೆ ಅನೇಕ ಅಂಶಗಳು ಕುತೂಹಲ ಮೂಡಿಸಿದವು. ಇಬ್ಬ ಜರ್ನಲಿಸ್ಟ್ ಆಗಿ ನೋಡಿದಾಗ ಅನುಮಾನ ಮೂಡುವುದು ಸಹಜ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಜನಸಾಮಾನ್ಯರು ಮಾತ್ರ ವಲ್ಲದೆ ಹೈಲಿ ಎಜುಕೇಟೆಡ್ ಮಂದಿ ಸಹ ಅನುಯಾಯಿಗಳಾಗಿದುದ್ದು ವಂಡರ್ ಎನಿಸಿತು. ಜತೆಗೆ ಮತ್ತೊಂದು ಪ್ರಮುಖ ವಿಷ್ಯ ಅಂದ್ರೆ, ಸತ್ಸಂಗದಲ್ಲಿ ಭಾಗವಹಿಸು ಮಂದಿ ತಮ್ಮ ಅನೇಕ ಸಮಸ್ಯೆಗಳನ್ನು ಗುರುಜೀ ಬಳಿ ಕೇಳಿಕೊಂಡು ಪರಿಹಾರಕ್ಕೆ ಯತ್ನಿಸುತ್ತಾರೆ. ಮಾತ್ರವಲ್ಲದೇ ದೂರ ವಿದೇಶಗಳಿಂದಲೂ ದೂರವಾಣಿ ಮೂಲಕ ಸಮಸ್ಯೆ ಹೇಳಿಕೊಳ್ಳುವವರು ಇದ್ದಾರೆ. ನಾನು ಹೋಗಿದ್ದ ಸಮಯದಲ್ಲಿ ಕೆನಡಾದಿಂದ ಗೃಹಿಣಿ ಪೋನ್ ಮಾಡಿದ್ದರು.
ಸತ್ಸಂಗದ ಬಳಿಕ ಮಹಿಳೆಯರು ಖುದ್ದು ತಾವೇ ಕಟ್ಟಡ ನಿಮರ್ಾಣ ಕೆಲಸವನ್ನು ಮಾಡುತ್ತಾರೆ. ಆಶ್ರಮದ ಕಾಂಪೌಂಡ್
ನಿಮರ್ಿಸುತ್ತಿರುವ ಈ ಮಹಿಳೆಯರು, ಬಲವಂತವಾಗಿ ಈ ಕೆಲಸ ಮಾಡುತ್ತಿಲ್ಲ. ಸ್ವಯಂ ಪ್ರೇರಣೆಯಿಂದ ಇದರಲ್ಲಿ
ತೊಡಗಿದ್ದೇವೆ. ಇದರಲ್ಲೇ ಸಂತೋಷ ಕಾಣುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೂ ಈ ಗುರುಜಿ ಬಗ್ಗೆ ಸಿಖ್
ಸಮುದಾಯದಲ್ಲೇ ಒಂದು ಪಂಗಡ ವಿರೋಧಿಸುತ್ತದೆ. ಈ ಬಗ್ಗೆ ಅನುಯಾಯಿಗಳಲ್ಲಿ ಪ್ರಶ್ನಿಸಿದಾಗ, ಗುರುಜಿ ಮಾಂಸ,
ಮಧ್ಯ ಸೇವನೆ ಮಾಡಬೇಡಿ ಎಂದು ಸಲಹೆ ನೀಡುತ್ತಾರೆ. ಇದನ್ನು ಅವರ ಲಕ್ಷಾಂತರ ಮಂದಿ ಫಾಲೋಯರ್ಸ್ಗಳು
ಅನುಸರಿಸುತ್ತಾರೆ. ಇದರಿಂದ ವೈನ್ಶಾಪ್ನವರಿಗೆ ಲಾಸ್ತಾನೆ. ಆದ್ದರಿಂದ ಈ ಸಂದರ್ಭದಲ್ಲಿ ಲಿಕ್ಕರ್ ಲಾಭಿ ಗುರುಜಿ ವಿರುದ್ಧ
ಕೆಲಸ ಮಾಡುತ್ತದೆ. ಇದು ಜಸ್ಟ್ ಒಂದು ಉದಾಹರಣೆ ಮಾತ್ರ. ಇಂಥದ್ದೆ ಅನೇಕ ಮಾಫಿಯಗಳು ಪಂಜಾಬ್ನಲ್ಲಿ ಕಾರ್ಯ
ನಿರ್ವಹಿಸುತ್ತಿವೆ. ಆದ್ದರಿಂದಲೇ ಲಕ್ಷಾಂತರ ಮಂದಿಯ ಆರಾಧ್ಯ ದೈವವಾಗಿರುವ ಗುರುಜಿಗೆ ಝಡ್ ಕೆಟಗರಿ ಸೆಕ್ಯೂರಿಟಿ
ಒದಗಿಸಿರುವುದು ಎಂದು ಸಮಜಾಯಿಸಿ ಕೊಡುತ್ತಾರೆ ಮಿಸ್ ಪೂನಂ.
----------------------

3 comments:

  1. Nice telling an incident in your own way is superb....photoes too are nice...

    ReplyDelete
  2. your way of presenting the incident with a humour is superb even the photoes are too nice...

    ReplyDelete