7.04.2009

ಪಾಂಡೇ ತೆಗೆದ ಖ್ಯಾತೆ......?

ಶಾಂತಿ-ನೆಮ್ಮದಿಯಿಂದಿದ್ದ ಮೈಸೂರು ನಗರದಲ್ಲಿ ಕೆಲ ದಿನಗಳಿಂದ ಅಶಾಂತಿಯದ್ದೇ ಸುದ್ದಿ.
ದುಷ್ಕಮರ್ಿಗಳು ತೆಗೆದ `ಖ್ಯಾತೆ'ಯಿಂದ ಎರಡು ಕೋಮುಗಳ ನಡುವೆ ಮಾರಾಮಾರಿ ನಡೆಯುವಂತಾಗಿದೆ. ಯಾರೋ ಒಂದಿಬ್ಬರ ವೈಯಕ್ತಿಕ ಹಿತಾಸಕ್ತಿಗಾಗಿ ಇಡೀ ಸಮುದಾಯದವರೇ ಪರಿತಪಿಸುವ ಸ್ಥಿತಿ ನಿಮರ್ಾಣವಾಗಿದೆ. ನಡುವೆ ನಮ್ಮ ಸೋ ಕಾಲ್ಡ್ ಪೊಲೀಟಿಕಲ್ ಲೀಡರ್ಸ್ ಅನ್ನಿಸಿಕೊಂಡವರು ಉರಿಯುವ ಬೆಂಕಿಗೆ ತುಪ್ಪ ಸುರಿಯಲು ಯತ್ನಿಸುತ್ತಿರುವುದು ಹೇಸಿಗೆ ಮೂಡಿಸುತ್ತಿದೆ. ಘಟನೆ ಯಾವುದೇ ಇರಲಿ, ಮೊದಲಿಗೆ ಇವರ ಟಾಗರ್ೆಟ್ ಆಡಳಿತಾರೂಢ ಸರಕಾರ ಮತ್ತು ಪೊಲೀಸರು.

ಶುಕ್ರವಾರ ಮೈಸೂರಿನ ಜಲದಶರ್ಿನಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಗೋಷ್ಠಿಯಲ್ಲೂ ಇದೇ ವರ್ತನೆ ಪುನಾರಾವರ್ತನೆಗೊಂಡಿತು. ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಎಲುಬಿಲ್ಲದ ನಾಲಿಗೆಯನ್ನು ಹುಚ್ಚಾಪಟ್ಟೆ ಹರಿಯಲು ಬಿಟ್ಟು ತಮ್ಮ ಡಾಶ್ಅನ್ನು ತಾವೇ ಕಳೆದುಕೊಂಡರು. ಈ ಹಂತದಲ್ಲೇ ಮೈಸೂರು ಜರ್ನಲಿಸ್ಟ್ಗಳು ಒಟ್ಟಾಗಿ ಪ್ರದಶರ್ಿಸಿದ ಸಾಮಾಜಿಕ ಕಳಕಳಿಗೆ ಥ್ಯಾಕ್ಸ್.

ಆ ದಿನ ನಡೆದಿದ್ದು ಇಷ್ಟೇ. ....
ಮೈಸೂರಿನ ಪುರಭವನದಲ್ಲಿ ಜು.3ರಂದು ಕಾಂಗ್ರೆಸ್ ಮುಖಂಡರು, ಪಕ್ಷದ ಕಾರ್ಯಕರ್ತರ ಸಭೆ ಆಯೋಜಿಸಿದ್ದರು. ಆದರೆ ಹಿಂದಿನ ದಿನ ನಡೆದ ಕೋಮು ಗಲಭೆಯಿಂದ ಈ ಸಭೆ ಅನಿವಾರ್ಯವಾಗಿ ರದ್ದಾಯಿತು. ಆದರೆ ಪಾಪ ಪ್ರೀಪ್ಲಾನ್ಡ್ ಮಾಡಿಕೊಂಡಿದ್ದ ಮುಖಂಡರಿಗೆ ಮಾಡಲು ಬೇರೆ ಕೇಮೇ ಇರಲಿಲ್ಲ. ಆದ್ದರಿಂದಲೇ ಮೊದಲು ಕ್ಯಾತಮಾರನಹಳ್ಳಿ, ಉದಯಗಿರಿಗೆ ಭೇಟಿ ನೀಡುತ್ತೇವೆ ಎಂಬ ಹೇಳಿಕೆ ಕೊಟ್ಟರು. ಅಷ್ಟರಲ್ಲಿ ನಗರದಲ್ಲಿ ಮೊಕ್ಕಾಂ ಹೂಡಿದ್ದ ಹಿರಿಯ ಪೊಲೀಸ್ ಅಧಿಕಾರಿ, ಘಟನಾ ಸ್ಥಳಕ್ಕೆ ತೆರಳಲು ಇದು ಸೂಕ್ತ ಸಮಯವಲ್ಲ, ದಯವಿಟ್ಟು.....ಕುಳಿತ್ಕೊಳ್ಳಿ ಎಂಬ ಸಂದೇಶ ರವಾನಿಸಿದರು. ಪಾಪಾ ಕಾಂಗ್ರೆಸ್ ನಾಯಕರು, ಬೆಂಗಳೂರಿನಿಂದ ಬೇರೆ ಹೊರಟಾಗಿತ್ತು. ಆದ್ದರಿಂದ ಬೇರೆ ವಿಧಿ ಇಲ್ಲದೆ ಜಲದಶರ್ಿನಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪಬ್ಲಿಸಿಟಿ ಲಾಸ್ ಮ್ಯಾಚ್ ಮಾಡಿಕೊಳ್ಳಲು ಮುಂದಾದರು.

ಅಲ್ಲೇ ಯಡವಟ್ಟಾಗಿದ್ದು. ..
ಮೈಸೂರಿನ ಉದಯಗಿರಿ, ಕ್ಯಾತಮಾರನಹಳ್ಳಿ ಪ್ರದೇಶಗಳ ಜಿಯಾಗ್ರಫಿಯಾಗಲಿ ಅಲ್ಲಿ ವಾಸಿಸುವ ಜನಗಳ ಬಯಾಗ್ರಫಿಯಾಗಲಿ ಅರಿಯದ ದೇಶಪಾಂಡೆ ಸಾಹೇಬರು, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿರುವವರಂತೆ ಏಕಾಏಕಿ ಭಾಷಣ ಶುರುವಿಟ್ಟರು. ಥೇಟ್ ಪುಡಾರಿ ಸ್ಟೈಲ್ನಲ್ಲಿ ಓತಾಪ್ರೋತವಾಗಿ ವಾಗ್ದಾಳಿ ಹರಿಯಬಿಟ್ಟರು. ಘಟನೆ ನಿಯಂತ್ರಿಸಲು ಜಿಲ್ಲಾಡಳಿತ ವಿಫಲವಾಗಿದೆ, ಪೊಲೀಸರು ಕಾನೂನು ಕೈಗೆತ್ತಿಕೊಂಡಿದ್ದಾರೆ ಎಂಬ ಅಣಿಮುತ್ತು ಸಹ ಉದುರಿಸಿದರು. ಆಗಲೇ ಮೀಡಿಯಾದವರು ಸಹನೆ ಕಳೆದುಕೊಂಡದ್ದು.

ಗಲಭೆ ನಡೆಸುತ್ತಿದ್ದವರನ್ನು ನಿಯಂತ್ರಿಸಲು ಪೊಲೀಸರು ಏನು ಮಾಡಬೇಕಿತ್ತು..?
ಎಂಬ ಪ್ರಶ್ನೆ ದೇಶಪಾಂಡೆ ಬಾಯಿ ಮುಚ್ಚಿಸಿತು.ದೇಶಪಾಂಡೆ ನಮ್ಮ ರಾಜ್ಯದ ಭವಿಷ್ಯದ ಮುಖ್ಯಮಂತ್ರಿ ಮೆಟಿರಿಯಲ್ಲು. (ಇದಕ್ಕೆ ಅವಶ್ಯಕವಾದ ಫೈನ್ಯಾಷಿಯಲ್ ಎಲಿಜಿಬಿಲಿಟಿ ಅವರತ್ರ ಇದೆ) ಇಂಥ ವ್ಯಕ್ತಿ ಈ ರೀತಿ ಲಂಗು ಲಗಾಮಿಲ್ಲದೆ ನಾಲಿಗೆ ಹರಿಯಬಿಡುತ್ತಿದ್ದುದನ್ನು ನೋಡಿದರೆ ಭವಿಷ್ಯ ಮಂಕಾಗಿ ಕಾಣಿಸುತ್ತದೆ. ಇನ್ನು ಎಂಥೆಂಥ ರಾಜಕಾರಣಿಗಳನ್ನು ಈ ರಾಜ್ಯ ನೋಡಬೇಕಪ್ಪ ಅನ್ನೋ ಆತಂಕ ಎದುರಾಗುತ್ತದೆ.

ಪಾಂಡೇ ಸಾಹೇಬರ ನಂತರ ಎಕ್ಸ್ ಡಿಪ್ಯೂಟಿ ಸಿಂ ಸಿದ್ದ್ರಾಮಣ್ಣ ಮಾತು ಶುರುವಿಟ್ಟುಕೊಂಡರು. ಪಕ್ಷದ ಅಧ್ಯಕ್ಷರು ಮಾಡಿದ ಆರೋಪಕ್ಕೆ ಪ್ರೆಸ್ನವರು ಬ್ರೇಕ್ ಹಾಕಿ ಪಚೀತಿ ಮಾಡಿದ್ದನ್ನು ಮುಗುಮ್ಮಾಗಿಯೇ ನೋಡಿಕೊಂಡಿದ್ದರು. ಆದ್ದರಿಂದಲೇ ದೇಶಪಾಂಡೆ ಅವರ ಅಭಿಪ್ರಾಯವನ್ನೇ ಕೊಂಚ ಸಾಫ್ಟ್ ಮ್ಯಾನರ್ನಲ್ಲಿ ಹೇಳುವ ಮೂಲಕ ಟಿಪಿಕಲ್ ಕಾಂಗ್ರೆಸ್ಸಿಗ ಎಂಬುದನ್ನು ಪ್ರೂವ್ ಮಾಡಿದರು. ಈ ಮುಖಂಡರ ದೊಂಬರಾಟದಿಂದ ಬೇಸತ್ತಿದ್ದ ನಾವು ಸಿದ್ದು ಮಾತು ನಿಲ್ಲಿಸು ತಿದ್ದಂತೆ ಜಾಗ ಖಾಲಿ ಮಾಡಿದೇವು. ವಿಪರ್ಯಾಸ ಎಂದ್ರೆ, ನಮ್ಮ ಎಕ್ಸ್ ಡಿಪ್ಯೂಟಿ ಸಿಎಂ ಇದನ್ನು ಹಳದಿ ಬಣ್ಣದಿಂದ ನೋಡಿದ್ದು. ಬಟ್ ವಿ ಕಾಂಟ್ ಡೂ ನಥಿಂಗ್...




(ವಿ.ಸೂ- ಬರಹಕ್ಕೂ ಬಿಸ್ಕೆಟ್ ತಿನ್ನುವ ಈ ಚಿತ್ರಕ್ಕೂ ಸಂಬಂಧವಿಲ್ಲ. ಗೆಳಯ ಗಿರೀಶ್ನ ಈ ಅಪರೂಪದ ಚಿತ್ರ ತೆಗೆದವರು ಕ್ಯಾಮೆರಾಮನ್ ಸುಧೀಂದ್ರ ಕುಮಾರ್ )

--------------------------------------------------

4 comments:

  1. ವರದಿಗಾರರ ಕೆಲಸ ಕೇವಲ ಸುದ್ದಿಯನ್ನು ಜನರೆಡೆಗೆ ಮುಟ್ಟಿಸುವುದು ಮಾತ್ರ. ನೀವೇ ಹೇಳಿದಂತೆ ಗಲಭೆಯನ್ನು ನಿಯಂತ್ರಿಸಲು ಪೊಲೀಸರಿದ್ದಾರೆ. ಅದಕ್ಕಾಗಿ ಬೇಕಾದ ಅವಶ್ಯ ಕ್ರಮಗಳನ್ನು ಅವರು ಕೈಗೊಳ್ಳುತ್ತಾರೆ. ಗಲಭೆಗಳನ್ನು ನಿಯಂತ್ರಿಸುವ ನೆಪದಲ್ಲಿ ಓದುಗರನ್ನು ಸುದ್ದಿಯಿಂದ ವಂಚಿಸುವುದು ತಪ್ಪಾಗುವುದಿಲ್ವಾ ?. ನಿಮ್ಮ ಬರಹದ ಶೈಲಿ ತುಂಬಾನೇ ಉತ್ತಮವಾಗಿತ್ತು. ಆದರೆ ಕೇವಲ ಕಾಂಗ್ರೆಸ್ ನಾಯಕರನ್ನು ತೆಗಳಲು ಅಕ್ಷರವನ್ನು ಬಳಸಿಕೊಂಡಿದ್ದು ಬೇಸರ ತರಿಸಿತು. ಮಂಗಳೂರಿನವರಾದ ನಮಗೆ ಮೈಸೂರು ಕೋಮು ಗಲಭೆ ಹೇಗೆ, ಏಕೆ ಉಂಟಾಯಿತು ಎಂಬ ನೈಜ ಚಿತ್ರಣ ನೀವು ಬ್ಲಾಗ್ನಲ್ಲಿ ಕೊಡಬಹುದು ಎಂದು ನಿರೀಕ್ಷಿಸಿದ್ದೆ.

    ReplyDelete
  2. super agi edy. adre KOMMU GALABE antha sensitive vishra galnu VOTE bank rajkiyakke, agu ONEDU koomina janaranu olysikolallu yantisuva DESPANDE antha yalla paksada PUDARI rajkarnigalige pattavagbeku.

    enodu vichra andre namma kela JOURNLIST galigu edu patavagabeku. yakndre most of SENIOR jornlist galu press met nalli PUDRI Rajakarnigalige prasne madade. avru yelidannu keli COPY WRITEING madtare. adre AA DINA navela prasne madi DESPANDE Yanna "ENGU TINDA MANGANA HAGE MADI" Journlist gallu COPY WRITER alla yenodanna tilsidivi

    ReplyDelete
  3. Common people like us beleive what ever that appears in media. But, its but you who really know the truth behind every incident that occurs in the society. Its a bad precedent to give more pririty to political leaders in incidents like this kind for they will lead in a way massacre of commonpeople in the days to come as they are lot more incidents of this kind in front of us. Somehow, Lok Sabha Member H.Vishwanath's words can be accepted. Lost Sip: The Photo is good but not the persons!!!!!!!!He is no smart like M.!!!!!!!!!!!!!!!!!!!!

    ReplyDelete
  4. Suddi channagide , adare Siddu bagge avaru patrakarthara bagge haladi kannininda nodduu salpa vistharavagi bareyabekittu

    mallu

    ReplyDelete